ಸೋಮವಾರಪೇಟೆ, ಏ. ೧: ಸಮೀಪದ ಶಾಂತಳ್ಳಿಯ ಸಂಜೀವಿನಿ ಮಹಿಳಾ ಒಕ್ಕೂಟ, ಪ್ರಕೃತಿ ಸಾಹಿತ್ಯ ಬಳಗ, ಸಹನ ಗೊಂಚಲು ಗುಂಪು ಇವುಗಳ ಆಶ್ರಯದಲ್ಲಿ ಶ್ರೀಕುಮಾರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಬಿದ್ದಪ್ಪ ವಹಿಸಿದ್ದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ತಂಗಮ್ಮ ಅವರು ಸಮಾರಂಭ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಿಡಿಓ ಅರುಣ್ ಭಾಸ್ಕರ್, ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಜಲಜಾ ಶೇಖರ್, ವಕೀಲರಾದ ಪವಿತ್ರ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಸವಿತ, ಉಪಾಧ್ಯಕ್ಷೆ ಹೇಮಾವತಿ, ತೇಜಸ್ವಿನಿ, ರಂಜಿತ, ಗೊಂಚಲು ಗುಂಪಿನ ಅಧ್ಯಕ್ಷೆ ಚಂದ್ರಾವತಿ, ಪ್ರಕೃತಿ ಸಾಹಿತ್ಯ ಬಳಗದ ಅಧ್ಯಕ್ಷೆ ರಾಧಿಕಾ, ಸಂಯೋಜಕಿ ಸುಮಿತ್ರ, ಗೌರಮ್ಮ, ಭಾಗ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ತೇಜಸ್ವಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್ ಗೇಮ್ಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಸ್ಥಳೀಯ ಕ್ರೀಡಾಪಟು ಗಿರಿಜಾ ಜೋಯಪ್ಪ, ಅಂಗನವಾಡಿ ಸಹಾಯಕಿ ದೇವಮ್ಮ, ನಿವೃತ್ತ ವಾಟರ್ಮೆನ್ ರಾಜು ಅವರುಗಳನ್ನು ಸನ್ಮಾನಿಸಲಾಯಿತು.