ಮಡಿಕೇರಿ, ಏ. ೧: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ ಪುಸ್ತಕಗಳನ್ನು ಇನ್ನು ಮುಂದೆ ಆನ್ಲೈನ್ ಮೂಲಕ ವ್ಯಾಪಕವಾಗಿ ಪ್ರಚಾರ ಹಾಗೂ ಮಾರಾಟ ಮಾಡಲು ಕೂರ್ಗ್ ಸೋಪ್ (ಅಔಔಖಉ SಊಔPPಇ) ಎಂಬ ಕೊಡಗಿನ ಸಂಸ್ಥೆ ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇನ್ನು ಮುಂದೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕಗಳನ್ನು ಅದರ ಬೆಲೆಗೆ ಅನುಗುಣವಾಗಿ ತಿತಿತಿ. ಛಿooಡಿgshoಠಿಠಿe.ಛಿom ಎಂಬ ವೆಬ್ಸೈಟ್ ಮೂಲಕ ಕೂಡ ಖರೀದಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.