ಸೋಮವಾರಪೇಟೆ,ಏ.೧: ಶ್ರೀ ಶಿವಕುಮಾರ ಸ್ವಾಮೀಜಿ ಅವರು ಈ ಜಗತ್ತು ಕಂಡ ಮಹಾನ್ ದಾರ್ಶನಿಕರಾಗಿದ್ದು, ಇವರ ಆದರ್ಶ ಪಾಲನೆಯಾಗಬೇಕಿದೆ ಎಂದು ಶಾಸಕ ರಂಜನ್ ಬಣ್ಣಿಸಿದರು.
ಕೊಡಗು ಜಿಲ್ಲಾ ವೀರಶೈವ ಮಹಾಸಭಾ, ಮಹಿಳಾ ಘಟಕ, ಯುವ ಘಟಕದ ವತಿಯಿಂದ ಡಾ.ಶಿವಕುಮಾರ ಸ್ವಾಮೀಜಿಗಳ ೧೧೫ನೆ ಜಯಂತಿಯ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಅವರು ಮಾತನಾಡಿದರು. ವಿದ್ಯೆ, ಅನ್ನ, ವಸತಿ ಹೀಗೆ ತ್ರಿವಿಧ ದಾಸೋಹಿಗಳಾಗಿ ಬಡವರು,ದೀನದಲಿತರ ಆಶಾಕಿರಣವಾಗಿದ್ದ ಸ್ವಾಮೀಜಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಾವು ಅವರಿಗೆ ನೀಡುವ ಗುರುಕಾಣಿಕೆಯಾಗಬೇಕೆಂದರು.
ಈ ಸಂದರ್ಭ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸತೀಶ್, ಮಹಾಸಭಾದ ರಾಜ್ಯಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ರಾಜ್ಯ ಪ್ರತಿನಿಧಿ ವಿರೂಪಾಕ್ಷ, ಜಿಲ್ಲಾಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಸಾಂಬಶಿವಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್, ಯುವಘಟಕದ ಜಿಲ್ಲಾಧ್ಯಕ್ಷ ಮೊಕ್ಷಿಕ್, ತಾಲೂಕು ಅಧ್ಯಕ್ಷ ಆದರ್ಶ್, ಸೋಮವಾರಪೇಟೆ ವೀರಶೈವ ಸಮಾಜದ ಯಜಮಾನ ಶಿವಕುಮಾರ್ ಮತ್ತಿತರರು ಹಾಜರಿದ್ದರು.