*ಸಿದ್ದಾಪುರ, ಏ. ೧: ಅಭ್ಯತ್ಮಂಗಲದ ಸರ್ವೆ ಸಂಖ್ಯೆ ೧೦೪/೧ ರ ಪೈಸಾರಿ ಜಾಗಕ್ಕೆ ಅಕ್ರಮವಾಗಿ ಬೇಲಿ ನಿರ್ಮಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಸರ್ವೆ ನಡೆಸಿ ಸರ್ಕಾರದ ಜಾಗವೆಂದು ಗುರುತಿಸಿದ್ದರೂ ಒತ್ತುವರಿದಾರರು ಮತ್ತೆ ಬೇಲಿ ನಿರ್ಮಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಹಿಂದೆ ಒತ್ತುವರಿದಾರರು ಬೇಲಿ ನಿರ್ಮಿಸಿ ಗ್ರಾಮಸ್ಥರ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆ ಗ್ರಾ.ಪಂ. ಅಧ್ಯಕ್ಷರು ಹಾಗೂ ಸ್ಥಳೀಯ ಮಹಿಳೆಯರೇ ಬೇಲಿಯನ್ನು ಕಿತ್ತೆಸೆದು ಸರ್ವೆಗಾಗಿ ಒತ್ತಾಯಿಸಿದ್ದರು. ನಂತರ ಸೋಮವಾರಪೇಟೆ ತಹಶೀಲ್ದಾರರು ಸರ್ವೆಗೆ ಆದೇಶಿಸಿದ್ದರು. ಸರ್ವೆ ನಡೆಸಿದ ಸಂದರ್ಭ ಇದು ಸರ್ಕಾರಿ ಜಾಗವೆಂದು ಖಾತ್ರಿಯಾಗಿತ್ತು. ಜಾಗವನ್ನು ವಶಕ್ಕೆ ಪಡೆದುಕೊಳ್ಳುವಂತೆ ಅಧಿಕಾರಿಗಳು ಪಂಚಾಯ್ತಿಗೆ ಸಲಹೆ ನೀಡಿದ್ದರು.
ಆದರೆ ಇಂದು ಮತ್ತೆ ಒತ್ತುವರಿದಾರರು ಬೇಲಿ ನಿರ್ಮಿಸಿಕೊಂಡು ಜಾಗವನ್ನು ಅಕ್ರಮವಾಗಿ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಸ್ಥಳೀಯ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಬೇಲಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.