ಪೊನ್ನಂಪೇಟೆ, ಏ. ೧: ಪ್ರತಿ ವರ್ಷ ನಡೆಯುವ ಪೊನ್ನಂಪೇಟೆ ತಾಲೂಕಿನ ಕುಂದದ ಈಚೂರು ಶ್ರೀ ಪಡುವೇರಿ ದಬ್ಬೇಚಮ್ಮ ದೇವಸ್ಥಾನದ ವಾರ್ಷಿಕ ಉತ್ಸವವು ಏಪ್ರಿಲ್ ೩ರಂದು ಭಾನುವಾರ (ನಾಳೆ) ಸಂಪನ್ನಗೊಳ್ಳಲಿದೆ.
ಕಳೆದ ತಿಂಗಳ ೨೪ರಂದು ಆರಂಭಗೊAಡ ಶ್ರೀ ದಬ್ಬೇಚಮ್ಮ ದೇವರ ಉತ್ಸವವು ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ಈಗಾಗಲೇ ೯ ದಿನಗಳು ಪೂರ್ಣಗೊಂಡಿದೆ. ತಾ ೧ರಂದು ದೇವರ ನೆರಪು ನಡೆದು, ತಾ. ೩ ರಂದು ದೇವರ ಅವಭೃತ ಸ್ನಾನದೊಂದಿಗೆ ಶ್ರೀ ದಬ್ಬೇಚಮ್ಮ ದೇವರ ವಾರ್ಷಿಕ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ದೇವಸ್ಥಾನದ ತಕ್ಕಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.