ಸೋಮವಾರಪೇಟೆ, ಮಾ.೩೧: ಸಮೀಪದ ಗೌಡಳ್ಳಿ ಗ್ರಾಮದ ಹಿಂದೂ ಗೆಳೆಯರ ಬಳಗದ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ೪ನೇ ವರ್ಷದ ಮುಕ್ತ ಹಿಂದೂ ಕಪ್ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ.
ಏಪ್ರಿಲ್ ೨ ಮತ್ತು ೩ರಂದು ಗೌಡಳ್ಳಿಯ ಬಿಜಿಎಸ್ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಪ್ರಥಮ ಬಹುಮಾನವಾಗಿ ಆಕರ್ಷಕ ಟ್ರೋಫಿಯೊಂದಿಗೆ ರೂ. ೧ ಲಕ್ಷ ನಗದು, ದ್ವಿತೀಯ ಬಹುಮಾನವಾಗಿ ಟ್ರೋಫಿ ಹಾಗೂ ೫೦ ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಬಳಗದ ಅಧ್ಯಕ್ಷ ನಾಗರಾಜು ತಿಳಿಸಿದ್ದಾರೆ.
ಮಲ್ನಾಡ್ ಯೂತ್ ಅಸೋಸಿಯೇಷನ್, ಮಾಸ್ರ‍್ಸ್ ಎಫ್‌ಸಿ, ಇಲೆವೆನ್ ಸ್ಟಾರ್ ಶನಿವಾರಸಂತೆ, ಯಂಗ್ ಯುನೈಟೆಡ್ ಕೊಪ್ಪ, ಟೀಮ್ ಪುನೀತ್ ರಾಜ್‌ಕುಮಾರ್, ಭಜರಂಗದಳ ಎ, ಅಭಿ ಫ್ರೆಂಡ್ಸ್, ಫ್ರೆಂಡ್ಸ್ ಎಫ್‌ಸಿ ಸುಂಟಿಕೊಪ್ಪ, ಟೀಮ್ ಶ್ರೀರಾಮ್, ಅನಿಲ್ ಮತ್ತು ಕುಮ್ಮಿ ಫ್ರೆಂಡ್ಸ್, ವಿಜಯನಗರ ಮೈಸೂರ್ ಎಫ್.ಸಿ, ತುಮಕೂರು ಎಫ್‌ಸಿ, ಭಜರಂಗದಳ ಬಿ, ನೆಹರು ಎಫ್‌ಸಿ ಪಾಲಿಬೆಟ್ಟ, ರೆಡ್ಡಿ ಬಾಯ್ಸ್ ಗೋಲ್ಡನ್ ಗಾಯ್ಸ್, ಕಾಫಿ ಲ್ಯಾಂಡ್ ಚಿಕ್ಕಮಗಳೂರು ತಂಡಗಳು ಭಾಗವಹಿಸಲಿವೆ.ಮಲ್ನಾಡ್ ಯೂತ್ ಅಸೋಸಿಯೇಷನ್, ಮಾಸ್ರ‍್ಸ್ ಎಫ್‌ಸಿ, ಇಲೆವೆನ್ ಸ್ಟಾರ್ ಶನಿವಾರಸಂತೆ, ಯಂಗ್ ಯುನೈಟೆಡ್ ಕೊಪ್ಪ, ಟೀಮ್ ಪುನೀತ್ ರಾಜ್‌ಕುಮಾರ್, ಭಜರಂಗದಳ ಎ, ಅಭಿ ಫ್ರೆಂಡ್ಸ್, ಫ್ರೆಂಡ್ಸ್ ಎಫ್‌ಸಿ ಸುಂಟಿಕೊಪ್ಪ, ಟೀಮ್ ಶ್ರೀರಾಮ್, ಅನಿಲ್ ಮತ್ತು ಕುಮ್ಮಿ ಫ್ರೆಂಡ್ಸ್, ವಿಜಯನಗರ ಮೈಸೂರ್ ಎಫ್.ಸಿ, ತುಮಕೂರು ಎಫ್‌ಸಿ, ಭಜರಂಗದಳ ಬಿ, ನೆಹರು ಎಫ್‌ಸಿ ಪಾಲಿಬೆಟ್ಟ, ರೆಡ್ಡಿ ಬಾಯ್ಸ್ ಗೋಲ್ಡನ್ ಗಾಯ್ಸ್, ಕಾಫಿ ಲ್ಯಾಂಡ್ ಚಿಕ್ಕಮಗಳೂರು ತಂಡಗಳು ಭಾಗವಹಿಸಲಿವೆ.