*ಸಿದ್ದಾಪುರ, ಮಾ. ೩೧: ಅಭ್ಯತ್ ಮಂಗಲದ ಗ್ರೀನ್ ಫೀಲ್ಡ್ ಎಸ್ಟೇಟ್‌ನ ಶ್ರೀ ವೈದ್ಯನಾಥ ದೈವರಾಜ ಕೋಟೆದಬಬ್ಬು ಸ್ವಾಮಿ ಸೇವಾ ಸಮಿತಿ ವತಿಯಿಂದ ವರ್ಷಂಪ್ರತಿ ನಡೆಸುತ್ತಿರುವ ಶ್ರೀ ವೈದ್ಯನಾಥೇಶ್ವರ ದೈವಸ್ಥಾನದ ವಾರ್ಷಿಕೋತ್ಸವ ಮತ್ತು ನೇಮೋತ್ಸವವು ಏ.೨, ೩ ಮತ್ತು ೪ ರಂದು ನಡೆಯಲಿದೆ.

ತಾ. ೨ ರಂದು ಬೆಳಿಗ್ಗೆ ೮ ಗಂಟೆಗೆ ಶ್ರೀ ವೈದ್ಯನಾಥ ಸ್ವಾಮಿಯ ಭಂಡಾರ ಹೇರಿಕೆ, ರಾತ್ರಿ ೧೦ ಗಂಟೆಗೆ ಕೋಟೆದ ಬಬ್ಬುಸ್ವಾಮಿ ಮತ್ತು ತಂಗಡಿ ತನ್ನಿಮಾನಿಗ ದೈವಗಳ ನೇಮೋತ್ಸವ ಮಂಗಳೂರಿನ ನವೀನ್ ಮತ್ತು ತಂಡದ ನೇತೃತ್ವದಲ್ಲಿ ನೆರವೇರಲಿದೆ.

ತಾ.೩ ರಂದು ರಾತ್ರಿ ಶ್ರೀ ಚಾಮುಂಡೇಶ್ವರಿ ಕತ್ತಲಕಾನದ ಗುಳಿಗ ಮತ್ತು ಜಾಗದ ಗುಳಿಗ ಹಾಗೂ ಪಂಜುರ್ಲಿ ಗುಳಿಗ ನೇಮೋತ್ಸವ ನಡೆಯಲಿದ್ದು, ಏ.೪ ರಂದು ಬೆಳಿಗ್ಗೆ ರಾಹುಗಳಿಗೆ ನೇಮೋತ್ಸವ ಜರುಗಲಿದೆ.

ತಾ.೨ ಮತ್ತು ೩ ರಂದು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ದಾಮು, ಕೇಶವ, ವಿಶ್ವನಾಥ ಲಿಂಗಪ್ಪ, ವಿನೋದ್ ಹಾಗೂ ಚೇತನ್ ತಿಳಿಸಿದ್ದಾರೆ.

ನ್ಯೂ ಫೀಲ್ಡ್ ಎಸ್ಟೇಟ್ ಮಾಲೀಕ ಪ್ರಮೋದ್ ಕುರಿಯನ್ ದೇವಾಲಯ ನಿರ್ಮಾಣಕ್ಕಾಗಿ ೧೨ ಸೆಂಟ್ ಜಾಗವನ್ನು ದಾನವಾಗಿ ನೀಡಿದ್ದು, ಮುಂದಿನ ವರ್ಷದ ನೂತನ ದೇವಾಲಯದಲ್ಲಿ ವಾರ್ಷಿಕೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.