ಮಡಿಕೇರಿ, ಮಾ. ೩೧: ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಗರ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ ೨೩ ಕೊನೆಯ ದಿನವಾಗಿದೆ.
ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಮಾಸಿಕ ಗೌರವಧನ ರೂ.೬ ಸಾವಿರ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಮಾಸಿಕ ಗೌರವಧನ ರೂ. ೬ ಸಾವಿರ ನೀಡಲಾಗುತ್ತದೆ. ಈ ಎರಡು ಹುದ್ದೆಗಳಿಗೆ ಎಸ್ಎಸ್ಎಲ್ಸಿ ಉತ್ತೀರ್ಣ/ ಅನುತ್ತೀರ್ಣ, ವಿಕಲಚೇತನತೆ ಪ್ರಮಾಣ ಶೇ.೪೦ ಕ್ಕಿಂತ ಮೇಲ್ಪಟ್ಟು ಶೇ.೭೫ ಕ್ಕಿಂತ ಕಡಿಮೆ ಇರಬೇಕು. ೧೮ ರಿಂದ ೪೫ ವರ್ಷದ ವಯೋಮಾನದವರಾಗಿರಬೇಕು.
ಹುದ್ದೆಗಳು ಖಾಲಿ ಇರುವ ವಿವರ: ಯುಆರ್ಡಬ್ಲುö್ಯ ನಗರಸಭೆ ಮಡಿಕೇರಿ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ವೀರಾಜಪೇಟೆ ಪಟ್ಟಣ ಪಂಚಾಯಿತಿ.
ವಿಆರ್ಡಬ್ಲುö್ಯ: ಮಡಿಕೇರಿ ತಾಲೂಕಿನ ಬಲ್ಲಮಾವಟಿ, ಚೆಂಬು, ಕುಂಜಿಲ, ಕೊಣಂಜಗೇರಿ ಸೋಮವಾರಪೇಟೆ ತಾಲೂಕಿನ ಬೇಳೂರು, ಚೆಟ್ಟಳ್ಳಿ, ದುಂಡಳ್ಳಿ, ಹಂಡ್ಲಿ, ನೇರುಗಳಲೆ, ಆಲೂರು ಸಿದ್ದಾಪುರ. ವೀರಾಜಪೇಟೆ ತಾಲೂಕಿನ ಅಮ್ಮತ್ತಿ, ಬಿರುನಾಣಿ, ದೇವರಪುರ, ಗೋಣಿಕೊಪ್ಪ, ಹಾಲುಗುಂದ, ನಿಟ್ಟೂರು, ನಾಲ್ಕೇರಿ, ಪೊನ್ನಪ್ಪಸಂತೆ, ಕದನೂರು, ಕೆ.ಬಾಡಗ, ಕಿರುಗೂರು, ಪಾಲಿಬೆಟ್ಟ, ತಿತಿಮತಿ, ಶ್ರೀಮಂಗಲ.
ಅರ್ಜಿ ನಮೂನೆಗಳನ್ನು ಸಂಬAಧಿಸಿದ ತಾಲೂಕಿನ ಎಂಆರ್ಡಬ್ಲುö್ಯಗಳಿAದ ಉಚಿತವಾಗಿ ಪಡೆದು ಏಪ್ರಿಲ್ ೨೩ ರೊಳಗೆ ಭರ್ತಿ ಮಾಡಿ ಅರ್ಜಿಗಳನ್ನು ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.