ಸೋಮವಾರಪೇಟೆ, ಮಾ. ೩೧: ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿ ಪಡೆದ ಕುಸುಬೂರು ಗ್ರಾಮದ ಕೆ.ಪಿ. ಸುದರ್ಶನ್ ಹಾಗೂ ದೀಪಿಕಾ ದಂಪತಿ ಪುತ್ರಿ ಸುಧೀಕ್ಷಾಳನ್ನು ಕುಸುಬೂರು ಮಹಾಲಿಂಗೇಶ್ವರ ಸ್ವಸಹಾಯ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬೇಳೂರು ಬಾಣೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸುಧೀಕ್ಷಾಳಿಗೆ ಪುಸ್ತಕಗಳು, ಪೆನ್ ಸೇರಿದಂತೆ ಕಲಿಕೋಪಕರಣಗಳನ್ನು ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್ ವಹಿಸಿ ಮಾತನಾಡಿ, ಸಾಧಕ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿ ಗಳಿಗೆ ಪ್ರೇರಣೆಯಾಗಬೇಕು. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳು ಸಾಧನೆ ಮಾಡಬೇಕೆಂದರು. ಕಾರ್ಯ ಕ್ರಮದಲ್ಲಿ ಉಪಾಧ್ಯಕ್ಷ ಸುದರ್ಶನ್ ಸೇರಿದಂತೆ ಸಂಘದ ಪದಾಧಿಕಾರಿ ಗಳು, ಸ್ಥಳೀಯರು ಉಪಸ್ಥಿತರಿದ್ದರು.