ಸೋಮವಾರಪೇಟೆ, ಮಾ. ೩೧: ಸಮೀಪದ ಹಾನಗಲ್ಲುಬಾಣೆ ಗ್ರಾಮದಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಉಷಾ ಹರೀಶ್ ಅವರು ರೂ. ೧ ಲಕ್ಷಕ್ಕೂ ಅಧಿಕ ಮೌಲ್ಯದ ಪಾತ್ರೆ, ಗ್ಯಾಸ್ ಸ್ಟೌವ್‌ಗಳನ್ನು ಉಚಿತವಾಗಿ ನೀಡಿದರು.
ಈ ಸಂದರ್ಭ ಗ್ರಾ.ಪಂ. ಸದಸ್ಯೆ ಉಷಾ, ಅಧ್ಯಕ್ಷೆ ಲಕ್ಷಿö್ಮÃ ಪಾಂಡಿಯನ್, ಉಪಾಧ್ಯಕ್ಷ ಮಿಥುನ್, ಸದಸ್ಯರಾದ ಸುಶೀಲ, ಸೇವಾ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಕೃಷ್ಣ, ಗೌರವಾಧ್ಯಕ್ಷ ಮಹೇಂದ್ರ, ಪ್ರಮುಖರಾದ ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.