ಕೂಡಿಗೆ, ಮಾ. ೩೧: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ನಡೆದ ೪ನೇ ವರ್ಷದ ಕೆವಿಎಲ್ ಮಾದರಿಯ ಕೂಡುಮಂಗಳೂರು ವಾಲಿಬಾಲ್ ಲೀಗ್ ಹೊನಲು ಬೆಳಕಿನ ಪಂದ್ಯಾಟದಲ್ಲಿ ಟೀಂ ಎನ್.ಆರ್. ತಂಡ ಪ್ರಥಮ ಸ್ಥಾನವನ್ನು ಪಡೆದು ನಗದು ಹಾಗೂ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು.
ಎರಡನೇ ಸ್ಥಾನವನ್ನು ಬ್ಯಾಡಗೊಟ್ಟ ಗ್ರಾಮದ ರಾಯಲ್ ಫ್ರೆಂಡ್ಸ್ ತಂಡ ಪಡೆದರೆ, ಮೂರನೇಯ ಸ್ಥಾನವನ್ನು ಜಿ. ಕಿಂಗ್ಸ್ ತಂಡ, ನಾಲ್ಕನೇ ಸ್ಥಾನವನ್ನು ಗೋಲ್ಡನ್ ಸ್ಕಾರ್ಪಿಯನ್ಸ್ ತಂಡ ನಗದು ಹಾಗೂ ಟ್ರೋಫಿ ಪ್ರಶಸ್ತಿ ಪಡೆದುಕೊಂಡಿತು.
ಪAದ್ಯಾವಳಿಯ ಉದ್ಘಾಟನೆ ಯನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಸಮಾಜ ಸೇವಕ ಹರಪಳ್ಳಿ ರವೀಂದ್ರ ನೆರವೇರಿಸಿ ಮಾತಾಡುತ್ತಾ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿಭಾವಂತ ಕ್ರೀಡಾ ಪ್ರತಿಭೆಯುಳ್ಳ ಕ್ರೀಡಾಪಟುಗಳು ಇದ್ದಾರೆ. ಅವರುಗಳ ಗುರುತಿಸುವಿಕೆಯು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ಆಗಬೇಕು. ಈ ಮೂಲಕ ಅನೇಕ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟಿçÃಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶಗಳು ದೊರೆಯುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್ ವಹಿಸಿದ್ದರು. ವೇದಿಕೆಯಲ್ಲಿ ಕೂಡು ಮಂಗಳೂರುವಿನ ಉದ್ಯಮಿಗಳಾದ ಅರುಣ್, ಸೋಮಶೇಖರ್, ಕಿಶೋರ್ ಕುಮಾರ್, ಶಶಿಕುಮಾರ್, ವಕೀಲ ಶಿವಮೂರ್ತಿ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಸುಭಾಷ್ ಸೇರಿದಂತೆ ಯುವಕ ಸಂಘದ ಪದಾಧಿಕಾರಿಗಳು, ದಾನಿಗಳು ಹಾಜರಿದ್ದರು.
ಪಂದ್ಯಾವಳಿಯು ಎರಡು ದಿನಗಳವರೆಗೆ ಹೊನಲು ಬೆಳಕಿನಲ್ಲಿ ಶ್ರೀ ಬಸವೇಶ್ವರ ಆಟದ ಮೈದಾನದಲ್ಲಿ ನಡೆಯಿತು. ಕೆವಿಎಲ್ ಲೀಗ್ ಪಂದ್ಯಾಟದಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದವು.