ಮಡಿಕೇರಿ, ಮಾ. ೩೧: ಸ್ಪೇಷಲ್ ಒಲಂಪಿಕ್ಸ್ ಭಾರತ್ ಆಯೋಜಿಸಿರುವ ಅಜಾಧಿಕ ಅಮೃತ್ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಏಪ್ರಿಲ್ ೭ ರಂದು ಬುದ್ಧಿಮಾಂದ್ಯತೆಯಿAದ ಬಳಲುತ್ತಿರುವವರಿಗೆ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿರುವ ಬುದ್ಧಿಮಾಂದ್ಯ ಮಕ್ಕಳನ್ನು ಹಾಗೂ ವಿಶೇಷ ಶಾಲೆಗಳಲ್ಲಿ ಓದುತ್ತಿರುವ ಎಲ್ಲಾ ಮಕ್ಕಳು (ಆರರಿಂದ ಇಪ್ಪತ್ತೆöÊದು ವರ್ಷದವರು) ನೋಂದಾಯಿಸಿಕೊಳ್ಳಲು ಕೋರಿದೆ.
ಜಿಲ್ಲೆಯಲ್ಲಿ ೨೦೦ಕ್ಕೂ ಆಧಿಕ ಬುದ್ಧಿಮಾಂದ್ಯತೆಯುಳ್ಳ ಮಕ್ಕಳು ಹೆಸರು ನೋಂದಣಿ ಆದಲ್ಲಿ ಏಪ್ರಿಲ್ ೭ ರಂದು ಜಿಲ್ಲೆಯಲ್ಲಿಯೇ ಕಾರ್ಯಕ್ರಮ ಆಯೋಜಿಸಲಾಗುವುದು. ನೋಂದಣೆಯಾಗುವ ಮಕ್ಕಳ ಸಂಖ್ಯೆ ಕಡಿಮೆ ಇದ್ದಲ್ಲಿ ಹತ್ತಿರದ ಜಿಲ್ಲೆಗಳಾದ ಹಾಸನ, ಮಂಡ್ಯ ಹಾಗೂ ಮಂಗಳೂರು ಇಲ್ಲಿ ನಡೆಯುವ ಆರೋಗ್ಯ ತಪಾಸಣಾ ಕಾರ್ಯಕ್ರಮಕ್ಕೆ ಕರೆದೊಯ್ಯಲಾಗುವುದು.
ನೋಂದಣೆಗಾಗಿ ಸ್ಪೆಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕ ಏರಿಯಾ ಪ್ರೋಗ್ರಾಂ ಮ್ಯಾನೇಜರ್ ಎನ್. ಅನಿಲ್‌ಕುಮಾರ್ ಇವರ ಮೊ. ೮೮೮೪೪೪೮೫೯೫ ಇಮೇಲ್-ಠಿಡಿomsobಞಚಿಡಿಟಿಚಿಣಚಿಞಚಿ@gmಚಿiಟ.ಛಿom ನ್ನು ಸಂಪರ್ಕಿಸುವAತೆ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ. ೦೮೨೭೨-೨೯೫೮೨೯ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ತಿಳಿಸಿದ್ದಾರೆ.