ಪೊನ್ನಂಪೇಟೆ, ಮಾ. ೩೧: ಶಾಂತಿ ಮತ್ತು ಭಾವೈಕ್ಯತೆಯ ಪ್ರತೀಕವಾಗಿರುವ ಇಸ್ಲಾಂ ಧರ್ಮ ಎಂದಿಗೂ ಅನ್ಯಧರ್ಮ ದ್ವೇಷವನ್ನು ಪ್ರೋತ್ಸಾಹಿಸುವುದಿಲ್ಲ. ಇತರ ಧರ್ಮವನ್ನು ಗೌರವದಿಂದ ಕಾಣದವನು ನಿಜವಾದ ಇಸ್ಲಾಂ ಅನುಯಾಯಿಯಾಗುವುದಿಲ್ಲ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಹೇಳಿದರು.
ವೀರಾಜಪೇಟೆ ಸಮೀಪದ ಇತಿಹಾಸ ಪ್ರಸಿದ್ಧ ಗುಂಡಿಕೆರೆ ಮಖಾಂ ಉರೂಸ್ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ತನ್ನ ಧರ್ಮದ ತತ್ವ ಸಿದ್ಧಾಂತಗಳನ್ನು ಅನುಸರಿಸಿ ಬದುಕುವುದರ ಜೊತೆಗೆ ಇತರ ಧರ್ಮವನ್ನು ಗೌರವಿಸುವುದೇ ಇಸ್ಲಾಂ ಧರ್ಮದ ಮೂಲ ಆಶಯವಾಗಿದೆ ಎಂದರು.
ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಗುಂಡಿಕೆರೆ ಜಮಾಅತ್‌ನ ಅಧ್ಯಕ್ಷ ಕೆ.ಯು. ಮಹಮ್ಮದ್ ಹಾಜಿ ಮಾತನಾಡಿ, ಪ್ರತಿ ಉರೂಸ್‌ಗಳ ಆಚರಣೆ ಹಿಂದೆಯೂ ತನ್ನದೇ ಆದ ಐತಿಹ್ಯವಿದೆ. ಉರೂಸ್ ಆಚರಣೆಯ ನೆಪದಲ್ಲಿ ಗ್ರಾಮದ ಸುತ್ತಮುತ್ತಲಿನಲ್ಲಿ ನೆಲೆಸಿರುವ ಎಲ್ಲ ಧರ್ಮದವರ ಸಂಗಮವು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಗುಂಡಿಕೆರೆ ಜಮಾಅತ್‌ನ ಖತೀಬ ಪಿ. ಇಸ್ಮಾಯಿಲ್ ಲತೀಫಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಚಿಟ್ಟಡೆ ಜಮಾಅತ್‌ನ ಖತೀಬ ಸಯ್ಯದ್ ಅಹಮದ್ ಖಾಸಿಂ ಆದೂರು, ಗುಂಡಿಕೆರೆ ಜಮಾಅತ್‌ನ ಸದರ್ ಸೈಯದ್ ಖಾತಿಂ ಅಲ್ ಹೈದ್ರೋಸಿ ತಂಗಳ್, ಸುಡಾನ್‌ನಲ್ಲಿ ಉದ್ಯಮಿಯಾಗಿರುವ ಗುಂಡಿಕೆರೆಯ ಎಂ.ಹೆಚ್. ಮೊಯ್ದು ಭಾಗವಹಿಸಿದ್ದರು. ಜಮಾಅತ್‌ನ ೧ನೇ ತಕ್ಕರಾದ ಸಿ.ಎ. ಉಮ್ಮರ್ ಹಾಜಿ, ೨ನೇ ತಕ್ಕರಾದ ಎಂ.ಪಿ. ಸಾದಲಿ, ಜಮಾಅತ್‌ನ ಉಪಾಧ್ಯಕ್ಷ ಎಂ.ವೈ. ಆಲಿ, ಜಮಾಅತ್‌ನ ಕೋಶಾಧಿಕಾರಿ ಎಂ.ಎA. ಅಲಿ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಎಂ.ಎ. ಇಸ್ಮಾಯಿಲ್, ಕಾರ್ಯದರ್ಶಿ ಸಿ.ಪಿ. ಆಲಿ, ಆಡಳಿತ ಮಂಡಳಿ ಸದಸ್ಯರಾದ ಎಂ.ಎA. ಇಸ್ಮಾಯಿಲ್, ಸಿ.ಯು. ಮೊಹಮದ್, ಎಂ.ಹೆಚ್. ರಝಾಕ್, ಶಫೀಕ್ ಅಮೀನಿ, ಎಂ.ಎA. ರಝಾಕ್, ಕೆ.ಎಂ. ಫಾರೂಕ್, ಎನ್.ಎಂ. ಬದ್ರುದ್ದೀನ್, ಪಿ.ಎಸ್. ಹನೀಫ್ ಮಿಸ್ಬಾಯಿ, ಗುಂಡಿಕೆರೆ ಜಮಾಅತ್‌ನ ಜಾಹಫರ್ ಮಿಸ್ಬಾಯಿ, ಸಲೀಂ ಅನ್ವಾರಿ ಅಲ್ ಅಹ್ಸನಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉರೂಸ್‌ನ ಸಮಾರೋಪದ ಭಾಗವಾಗಿ ಮೌಲೂದ್ ಪಾರಾಯಣ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ವಿಶೇಷ ಧಾರ್ಮಿಕ ಉಪನ್ಯಾಸ ಹಾಗೂ ಧಿಕ್ರ ದುಅ ಮಜ್ಲಿಸ್‌ಗೆ ಹಿರಿಯ ಧಾರ್ಮಿಕ ಪಂಡಿತರಾದ ಸೈಯದ್ ಜೈನುದ್ದೀನ್ ಅಲ್ ಬುಖಾರಿ ಕೂರಿಕ್ಕುಯಿ ತಂಗಳ್ ನೇತೃತ್ವ ವಹಿಸಿದ್ದರು.
ಗುಂಡಿಕೆರೆ ಜಮಾಅತ್‌ನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು. ಮಹಮ್ಮದ್ ಹಾಜಿ ಅವರು ಧ್ವಜಾರೋಹಣ ನೆರವೇರಿಸುವುದರ ಮೂಲಕ ಗುಂಡಿಕೆರೆ ಉರೂಸ್‌ಗೆ ಚಾಲನೆ ನೀಡಲಾಗಿತ್ತು. ಬಳಿಕ ನಡೆದ ಮಖಾಂ ಅಲಂಕಾರ ಹಾಗೂ ಸಾಮೂಹಿಕ ಪ್ರಾರ್ಥನೆಗೆ ಗುಂಡಿಕೆರೆ ಜಮಾಅತ್‌ನ ಖತೀಬ ಪಿ. ಇಸ್ಮಾಯಿಲ್ ಲತೀಫಿ ಅವರು ನೇತೃತ್ವ ವಹಿಸಿದ್ದರು.
ಇದಾದ ಬಳಿಕ ನಡೆದ ಬಂಡಾರ ಜಮಾಯಿಸುವ ಕಾರ್ಯ ಕ್ರಮಕ್ಕೆ ಗುಂಡಿಕೆರೆ ಜಮಾಅತ್‌ನ ೧ನೇ ತಕ್ಕರಾದ ಸಿ.ಎ. ಉಮ್ಮರ್ ಹಾಜಿ ಮತ್ತು ೨ನೇ ತಕ್ಕರಾದ ಎಂ.ಪಿ. ಸಾದಲಿ ಅವರು ಚಾಲನೆ ನೀಡಿದ್ದರು.