ಪೊನ್ನಂಪೇಟೆ, ಮಾ. ೩೦: ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದಿAದ ಕಾರ್ಯರೂಪಕ್ಕೆ ತಂದಿರುವ ಜ್ಞಾನವಿಕಾಸ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬಗಳಿಗೆ ಪೊನ್ನಂಪೇಟೆಯಲ್ಲಿ ವಾತ್ಸಲ್ಯ ಕಿಟ್ ವಿತರಿಸಲಾಯಿತು.
ಅರ್ಹ ಫಲಾನುಭವಿಗಳಿಗೆ ಮಂಜೂರಾದ ಪಾತ್ರೆಗಳು, ಹೊದಿಕೆ, ಬಟ್ಟೆ ಇನ್ನಿತರ ದಿನಬಳಕೆಯ ಸಾಮಗ್ರಿಗಳನ್ನು ಒಳಗೊಂಡ ವಾತ್ಸಲ್ಯ ಕಿಟ್ ಅನ್ನು ಪೊನ್ನಂಪೇಟೆ ವಲಯದ ೭ ಕುಟುಂಬಗಳಿಗೆ ತಾಲೂಕು ಯೋಜನಾಧಿಕಾರಿ ಪದ್ಮಯ್ಯ ವಿತರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ನರಸಿಂಹಮೂರ್ತಿ, ಮಾಜಿ ಒಕ್ಕೂಟ ಅಧ್ಯಕ್ಷ ಗಿರೀಶ್, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಗ್ರೇಯಾ, ಸೇವಾ ಪ್ರತಿನಿಧಿಗಳ ಆದ ಪ್ರಶಾಂತಿ, ರೇಖಾ, ರೋಹಿಣಿ, ನಮಿತ ಉಪಸ್ಥಿತರಿದ್ದರು.