ಮಡಿಕೇರಿ, ಮಾ. ೩೦: ಜಿಲ್ಲೆಯಲ್ಲಿ ಕಾವೇರಿ ನದಿ ಗಡಿ ಗುರುತು ಸರ್ವೆ ಕಾರ್ಯ ಸಂಬAಧ ಕ್ರಮಕೈಗೊಂಡು ಗ್ರಾಮ ನಕಾಶೆಯಲ್ಲಿ ದಾಖಲಿಸಲಾಗಿದೆ ಎಂದು ವಿಧಾನ ಪರಿಷತ್ತಿನಲ್ಲಿ ಶಾಂತೆಯAಡ ವೀಣಾ ಅಚ್ಚಯ್ಯ ಪ್ರಶ್ನೆಗೆ ಕಂದಾಯ ಸಚಿವ ಆರ್.ಅಶೋಕ್ ಉತ್ತರಿಸಿದರು.

ಗಡಿ ಗುರುತು ಕಾರ್ಯ ನಡೆಯದಿರುವುದರಿಂದ ನದಿಯ ಸಂರಕ್ಷಣೆ, ತಟಗಳ ಅಭಿವೃದ್ಧಿಯಾಗದಿರುವುದು ಸರಕಾರದ ಗಮನಕ್ಕೆ ಬಂದಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಡಗಿನ ಎಲ್ಲಾ ಗ್ರಾಮಗಳಲ್ಲಿ ಅಳತೆ ಕಾರ್ಯ ಕೈಗೊಂಡು ಗ್ರಾಮದ ಖಾಸಗಿ, ಸರಕಾರಿ ಜಮೀನುಗಳು, ದಾರಿ ಹಳ್ಳ ಮತ್ತು ನದಿಯ ಗಡಿಗಳನ್ನು ಅಳತೆಯಿಂದ ಗುರುತಿಸಲಾಗಿದ್ದು, ಕಾವೇರಿ ನದಿಯ ತಟಗಳನ್ನು ಗುರುತಿಸಿ ದಾಖಲೆಗಳನ್ನು ತಯಾರಿಸಲಾಗಿದೆ. ಅದರಂತೆ ಗ್ರಾಮ ನಕಾಶೆಯಲ್ಲಿ ಸಹ ದಾಖಲಿಸಲಾಗಿದೆ. ಕೊಡಗು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜಿಲ್ಲೆಯ ಕಾವೇರಿ ನೀರಾವರಿ ನಿಗಮ ಮಡಿಕೇರಿ ವ್ಯಾಪ್ತಿಯ ತಾವೂರು ಮತ್ತು ಭಾಗಮಂಡಲ ಗಡಿಯಲ್ಲಿ ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೆ ಕಾರ್ಯ ನಡೆಸಿ ಕಾವೇರಿ ನದಿ ಗಡಿ ಗುರುತಿಸುವ ಕಾರ್ಯ ಕೈಗೆತ್ತುಕೊಳ್ಳಲಾಗಿದೆ ಎಂದು ವಿವರಿಸಿದ ಅವರು, ಕಾವೇರಿ ನದಿ ಗಡಿ ಅಳತೆ ಕುರಿತು ಸಂಬAಧಿಸಿದ ಪ್ರಾಧಿಕಾರ/ಅಧಿಕಾರಿಗಳಿಂದ ಯಾವುದೇ ನಿರ್ದೇಶನ

(ಮೊದಲ ಪುಟದಿಂದ) ಅಥವಾ ಕೋರಿಕೆ ಸ್ವೀಕೃತವಾಗಿರುವುದಿಲ್ಲ ಎಂದು ಮಾಹಿತಿ ನೀಡಿದರು.

ಕಾವೇರಿ ನದಿ ಸಂರಕ್ಷಣೆ ಮತ್ತು ಅಭಿವೃದ್ಧಿ ಸಂಬAಧ ಹಲವಷ್ಟು ಕ್ರಮಕೈಗೊಳ್ಳಲಾಗಿದೆ. ಕೊಪ್ಪ ಸೇತುವೆ ಬಳಿ ನೀರಿನ ಹರಿವಿಗೆ ಅಡಚಣೆಯಾಗಿದ್ದ ಜೊಂಡು ಹಾಗೂ ಮಣ್ಣು ಮಿಶ್ರಿತ ಹೂಳು ತೆಗೆಯುವ ಕಾಮಗಾರಿಯನ್ನು ರೂ. ೮೮ ಲಕ್ಷದಲ್ಲಿ ಕೈಗೊಂಡು ಪೂರ್ಣಗೊಳಿಸಲಾಗಿದೆ. ರೂ. ೫೦ ಲಕ್ಷದಲ್ಲಿ ೩ ಕಾಮಗಾರಿಗಳನ್ನು ಕೈಗೆತ್ತುಕೊಂಡಿದ್ದು, ಗುತ್ತಿಗೆದಾರರಿಗೆ ವಹಿಸಲಾಗಿದೆ ಸೇರಿದಂತೆ ಇನ್ನಿತರ ಕಾರ್ಯಕ್ರಮ ಅನುಷ್ಠಾನಗೊಂಡಿದೆ ಎಂದು ತಿಳಿಸಿದರು.