ಮಡಿಕೇರಿ, ಮಾ. ೩೦: ಮುಂಬರಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡವನ್ನು ಮೆರಥಾನ್‌ನಲ್ಲಿ ಪ್ರತಿನಿಧಿಸಲು ಜಿಲ್ಲೆಯ ಯುವಕ ಅಪ್ಪಚಂಗಡ ಬಬಿನ್ ಬೆಳ್ಯಪ್ಪ ಅವರು ಆಯ್ಕೆಗೊಂಡಿದ್ದಾರೆ. ಜುಲೈ ತಿಂಗಳಿನಲ್ಲಿ ಇಂಗ್ಲೆಂಡ್‌ನ ರ‍್ಮಿಂಗ್ ಹ್ಯಾಂನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಸೆಪ್ಟೆಂಬರ್‌ನಲ್ಲಿ ಚೈನಾದಲ್ಲಿ ಏಷ್ಯನ್‌ಗೇಮ್ಸ್ ಜರುಗಲಿದೆ.
ಇತ್ತೀಚೆಗೆ ನಡೆದ ನ್ಯಾಷನಲ್ ಮೆರಥಾನ್ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಬಬಿನ್ ಬೆಳ್ಯಪ್ಪ ಸೇರಿದಂತೆ ಆರು ಮಂದಿ ಭಾರತವನ್ನು ೪೨.೧೯೫ ಕಿ.ಮೀ. ಮೆರಥಾನ್‌ನಲ್ಲಿ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಕೆಲ ಸಮಯದ ಹಿಂದೆ ಬಾಂಗ್ಲಾದೇಶದ ಢಾಕಾದಲ್ಲಿ ಇದಕ್ಕಾಗಿ ಆಯ್ಕೆ ಶಿಬಿರ ನಡೆದಿತ್ತು. ಅಲ್ಲಿ ನಡೆದ ಮೆರಥಾನ್ ಸ್ರ‍್ಧೆಯಲ್ಲಿ ಆಯ್ಕೆಗಾಗಿ ೨ ಗಂಟೆ ೧೮ ನಿಮಿಷ ೪೫ ಸೆಕೆಂಡ್ ಸಮಯ ನಿಗದಿಪಡಿಸಲಾಗಿತ್ತು. ಇಲ್ಲಿ ಬಬಿನ್ ಕಂಚಿನ ಪದಕ ಗಳಿಸಿದರಾದರೂ ನಿಗದಿತ ಸಮಯದಲ್ಲಿ ಗುರಿ ತಲುಪದ ಕಾರಣ ಆಯ್ಕೆಯಾಗಿರಲಿಲ್ಲ. ಇಲ್ಲಿ ಇವರು ಈ ಅಂತರವನ್ನು ೨.೨೦ ನಿಮಿಷದಲ್ಲಿ ಕ್ರಮಿಸಿದ್ದರು.ಮಡಿಕೇರಿ, ಮಾ. ೩೦: ಮುಂಬರಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡವನ್ನು ಮೆರಥಾನ್‌ನಲ್ಲಿ ಪ್ರತಿನಿಧಿಸಲು ಜಿಲ್ಲೆಯ ಯುವಕ ಅಪ್ಪಚಂಗಡ ಬಬಿನ್ ಬೆಳ್ಯಪ್ಪ ಅವರು ಆಯ್ಕೆಗೊಂಡಿದ್ದಾರೆ. ಜುಲೈ ತಿಂಗಳಿನಲ್ಲಿ ಇಂಗ್ಲೆಂಡ್‌ನ ರ‍್ಮಿಂಗ್ ಹ್ಯಾಂನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಸೆಪ್ಟೆಂಬರ್‌ನಲ್ಲಿ ಚೈನಾದಲ್ಲಿ ಏಷ್ಯನ್‌ಗೇಮ್ಸ್ ಜರುಗಲಿದೆ.
ಇತ್ತೀಚೆಗೆ ನಡೆದ ನ್ಯಾಷನಲ್ ಮೆರಥಾನ್ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಬಬಿನ್ ಬೆಳ್ಯಪ್ಪ ಸೇರಿದಂತೆ ಆರು ಮಂದಿ ಭಾರತವನ್ನು ೪೨.೧೯೫ ಕಿ.ಮೀ. ಮೆರಥಾನ್‌ನಲ್ಲಿ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಕೆಲ ಸಮಯದ ಹಿಂದೆ ಬಾಂಗ್ಲಾದೇಶದ ಢಾಕಾದಲ್ಲಿ ಇದಕ್ಕಾಗಿ ಆಯ್ಕೆ ಶಿಬಿರ ನಡೆದಿತ್ತು. ಅಲ್ಲಿ ನಡೆದ ಮೆರಥಾನ್ ಸ್ರ‍್ಧೆಯಲ್ಲಿ ಆಯ್ಕೆಗಾಗಿ ೨ ಗಂಟೆ ೧೮ ನಿಮಿಷ ೪೫ ಸೆಕೆಂಡ್ ಸಮಯ ನಿಗದಿಪಡಿಸಲಾಗಿತ್ತು. ಇಲ್ಲಿ ಬಬಿನ್ ಕಂಚಿನ ಪದಕ ಗಳಿಸಿದರಾದರೂ ನಿಗದಿತ ಸಮಯದಲ್ಲಿ ಗುರಿ ತಲುಪದ ಕಾರಣ ಆಯ್ಕೆಯಾಗಿರಲಿಲ್ಲ. ಇಲ್ಲಿ ಇವರು ಈ ಅಂತರವನ್ನು ೨.೨೦ ನಿಮಿಷದಲ್ಲಿ ಕ್ರಮಿಸಿದ್ದರು.ಇನ್ಸ್ಟಿಟ್ಯೂಟ್ ಪುಣೆಯಲ್ಲಿ ಇವರು ತರಬೇತಿ ಪಡೆಯುತ್ತಿದ್ದು ಇಲ್ಲಿನ ಕ್ರೀಡಾ ಸ್ಪರ್ಧಿಗಳನ್ನು ೨೦೨೪ರ ಪ್ಯಾರಿಸ್ ಒಲಂಪಿಕ್ಸ್ಗಾಗಿ ಸಜ್ಜುಗೊಳಿಸ ಲಾಗುತ್ತಿದೆ. ಇದೇ ಕೇಂದ್ರದ ಕ್ರೀಡಾಪಟು ನೀರಜ್‌ಚೋಪ್ರಾ ಕಳೆದ ಒಲಂಪಿಕ್ಸ್ನಲ್ಲಿ ಪದಕ ಗಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಮೆರಥಾನ್‌ನಲ್ಲಿ ೧೯೭೬ರಲ್ಲಿ ಭಾರತದ ಶಿವನಾಥ್‌ಸಿಂಗ್ ಅವರು ೨ ಗಂಟೆ ೧೨ ನಿಮಿಷದ ಸಾಧನೆಯ ದಾಖಲೆ ಹೊಂದಿದ್ದಾರೆ. ಈ ದಾಖಲೆಯನ್ನು ಸರಿಗಟ್ಟುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಕ್ರೀಡಾಪಟುಗಳನ್ನು ರೂಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಬಿನ್ ಹೇಳಿದರು.
ಟಿ.ಶೆಟ್ಟಿಗೇರಿ ಗ್ರಾಮದವರಾದ ಇವರು ಅಲ್ಲಿನ ಪಟ್ಟಿಕಾಡ್ ಶಾಲೆ, ಶ್ರೀಮಂಗಲ ಜೆ.ಸಿ. ಶಾಲೆ, ಪದವಿಪೂರ್ವ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದು ಮೂಡಬಿದರೆಯ ಆಳ್ವಾಸ್‌ನಲ್ಲಿ ಡಿಗ್ರಿ ಪಡೆದು ಆರ್ಮಿ ಸರ್ವಿಸಸ್‌ಗೆ ಆಯ್ಕೆಯಾಗಿದ್ದಾರೆ. ಸರ್ವಿಸಸ್ ಮೂಲಕ ಇದೀಗ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇವರು ಅಪ್ಪಚಂಗಡ ಬೋಪಯ್ಯ ಹಾಗೂ ರೋಜಾ ಬೊಳ್ಳಮ್ಮ (ತಾಮನೆ ಪೋರಂಗಡ) ದಂಪತಿಯ ಪುತ್ರ.