ವೀರಾಜಪೇಟೆ, ಮಾ. ೩೦: ವೀರಾಜಪೇಟೆಯ ಅರಸುನಗರದ ಶ್ರೀ ಮುತ್ತಪ್ಪ ಹಾಗೂ ತಿರುವಪ್ಪನ (ಕೋಲ) ತೆರೆ ಮಹೋತ್ಸವವು ಎರಡು ದಿನಗಳ ಕಾಲ ನಡೆಯಿತು. ತಾ. ೨೬ ರಂದು ಸಂಜೆ ೬.೩೦ಕ್ಕೆ ಮುತ್ತಪ್ಪನ ವೆಳ್ಳಾಟದೊಂದಿಗೆ ಪ್ರಾರಂಭಗೊAಡು ನಂತರ ಗುಳಿಗನ ವೆಳ್ಳಾಟ ನಡೆದು ತಾ. ೨೭ ರಂದು ಮುಂಜಾನೆ ೩.೩೦ಕ್ಕೆ ಗುಳಿಗನ ತೆರೆ ನಂತರ ಮುತ್ತಪ್ಪ ಹಾಗೂ ತಿರುವಪ್ಪನ ಕೋಲ ನಡೆಯಿತು. ಇದಕ್ಕೂ ಮೊದಲು ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸ್ಥಳೀಯ ಜ್ಯೋತಿಷ್ಯರಾದ ದಿವಾಕರ್ ಭಟ್ ದೀಪ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಸದಾನಂದ, ಪ್ರದೀಪ್, ಹರೀಶ್ ಗುರು, ಕಸ್ತೂರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಶ್ರೇಯಾ, ಪ.ಪಂ.ಮಾಜಿ ಸದಸ್ಯೆ ಶೀಭಾ ಹಾಗೂ ಇತರರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳು, ಪುಟ್ಟ ಮಕ್ಕಳಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತೆರೆ ಮಹೋತ್ಸವ ಸಂದರ್ಭ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.