ಮಡಿಕೇರಿ, ಮಾ. ೨೯: ಶ್ರೀ ಓಂಕಾರೇಶ್ವರ ದೇವಾಲಯದ ಸಮೂಹ ದೇವಾಲಯವಾದ ಶ್ರೀ ಆಂಜನೇಯ ದೇವಾಲಯದಲ್ಲಿ ಪ್ರತಿ ತಿಂಗಳ ಮೊದಲ ಶನಿವಾರ ನಡೆಸಲಾಗುತ್ತಿದ್ದ ಶನಿ ಕಲ್ಪೋಕ್ತ ಸೇವೆಯನ್ನು ಕೋವಿಡ್-೧೯ ರ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು.

ಪ್ರಸ್ತುತ ಕೋವಿಡ್-೧೯ ಸಾಂಕ್ರಾಮಿಕ ರೋಗವು ನಿಯಂತ್ರಣ ದಲ್ಲಿರುವುದರಿಂದ, ಮುನ್ನೆಚ್ಚರಿಕೆಯ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಶನಿ ಕಲ್ಪೋಕ್ತ ಸೇವೆ ಪುನರ್ ಆರಂಭಿಸಲಾಗುತ್ತಿದೆ.

ಹೊಸ ವರ್ಷ ಯುಗಾದಿ ಹಬ್ಬದ ಆಚರಣೆಯೊಂದಿಗೆ ಈ ಮಾಹೆಯ ಶನಿ ಕಲ್ಪೋಕ್ತ ಸೇವೆಯನ್ನು ಏಪ್ರಿಲ್ ೨ ರಂದು ಹಮ್ಮಿಕೊಳ್ಳಲಾಗಿದೆ. ಆಸಕ್ತ ಸಾರ್ವಜನಿಕ ಭಕ್ತಾದಿಗಳು ದೇವಾಲಯದ ಸೇವಾ ಕೌಂಟರ್‌ನಿAದ ರಶೀದಿಯನ್ನು ಪಡೆದುಕೊಂಡು, ಶನಿ ಕಲ್ಪೋಕ್ತ ಸೇವೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತಾಧಿಕಾರಿ ಬಿ.ಎಂ. ಕೃಷ್ಣಪ್ಪ ಕೋರಿದ್ದಾರೆ.