ಮಡಿಕೇರಿ ಮಾ.೨೯ : ಕೊಡಗಿನ ಮೂಲದವರಾದ ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ ಡಾ. ವಿ.ಆರ್. ಅಯ್ಯಪ್ಪನ್ ಅವರು ಕರ್ನಾಟಕದ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಇವರು ಕುಶಾಲನಗರದ ನಿವಾಸಿಗಳಾದ ಕೆ.ಜಿ. ರುಕ್ಮಿಣಿ ಹಾಗೂ ರಾಮಚಂದ್ರ ಅವರ ಪುತ್ರ.