ಮಡಿಕೇರಿ, ಮಾ. ೨೯: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಘಟಕದ ಜಿಲ್ಲಾ ಸಭಾಧ್ಯಕ್ಷರಾಗಿ ಬಿ.ಕೆ. ರವೀಂದ್ರ ರೈ, ಉಪಾಧ್ಯಕ್ಷರಾಗಿ ಅನಿಲ್ ಎಚ್.ಟಿ., ಪ್ರಧಾನ ಕಾರ್ಯದರ್ಶಿಯಾಗಿ ಮುರಳೀಧರ್ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿದ ರೆಡ್ ಕ್ರಾಸ್ ವಾರ್ಷಿಕ ಮಹಾಸಭೆಯಲ್ಲಿ ೨೦೨೨-೨೫ನೇ ಸಾಲಿಗೆ ನೂತನ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ ನಡೆಯಿತು. ಈ ಸಂದರ್ಭ ನಿರ್ದೇಶಕರಾಗಿ ವಸಂತಕುಮಾರ್, ಮಹಮ್ಮದ್ ಹನೀಫ್, ಸತೀಶ್ ರೈ, ಶರತ್ ಶೆಟ್ಟಿ, ಎಂ. ಧನಂಜಯ, ಬೋಪಯ್ಯ, ಜೊಸೆಫ್ ಶ್ಯಾಮ್, ಬಿ.ಕೆ. ರವೀಂದ್ರ ರೈ, ಅನಿಲ್ ಎಚ್.ಟಿ., ಎ.ಕೆ. ಜೀವನ್, ವಿಜಯ್ ಶೆಟ್ಟಿ, ಸತೀಶ್ ಸೋಮಣ್ಣ ಡಾ. ಪ್ರಶಾಂತ್ ಸಿ.ಆರ್., ಡಾ. ಎಂ. ವೀಣಾ, ಮಹಮ್ಮದ್ ಹನೀಫ್, ಪ್ರಕಾಶ್, ಮುರಳಿಧರ್ ಹೆಚ್.ಆರ್. ಅವರನ್ನು ನಿರ್ದೇಶಕ ರನ್ನಾಗಿ ಆಯ್ಕೆ ಮಾಡಲಾಯಿತು.

ಅನಂತರ ನಡೆದ ಆಡಳಿತ ಮಂಡಳಿ ಆಯ್ಕೆ ಸಭೆಯಲ್ಲಿ ಎರಡನೇ ಅವಧಿಗೆ ಹಾಲಿ ಸಭಾಧ್ಯಕ್ಷ ಬಿ.ಕೆ. ರವೀಂದ್ರ ರೈ ಅವರನ್ನು ಸಭಾಧ್ಯಕ್ಷರ ನ್ನಾಗಿಯೂ ಹಾಲಿ ಉಪಾಧ್ಯಕ್ಷ ಅನಿಲ್ ಎಚ್.ಟಿ. ಅವರನ್ನು ಮುಂದಿನ ಅವಧಿಗೂ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾ ಯಿತು. ಮತ್ತೊಂದು ಉಪಾಧ್ಯಕ್ಷ ಸ್ಥಾನಕ್ಕೆ ಮಾತಂಡ ಸುರೇಶ್ ಚಂಗಪ್ಪ ಅವರನ್ನು, ಖಚಾಂಚಿ ಸ್ಥಾನಕ್ಕೆ ಜೋಸೆಫ್ ಶ್ಯಾಮ್ ಅವರನ್ನು ಅವಿರೋಧ ವಾಗಿ ಆಯ್ಕೆ ಮಾಡಲಾಯಿತು.

ಯೂತ್ ರೆಡ್ ಕ್ರಾಸ್ ಘಟಕದ ಅಧ್ಯಕ್ಷರನ್ನಾಗಿ ಎಂ. ಧನಂಜಯ, ಪ್ರಥಮ ಚಿಕಿತ್ಸಾ ತರಬೇತಿ ಘಟಕಕ್ಕೆ ಅಧ್ಯಕ್ಷರನ್ನಾಗಿ ವಸಂತ ಕುಮಾರ್, ತಾಲೂಕು ಘಟಕದ ರಚನೆಯ ಹೊಣೆಗಾರಿಕೆಗೆ ಸತೀಶ್ ಸೋಮಣ್ಣ ಅವರನ್ನು ನೇಮಕ ಮಾಡಲಾಯಿತು.

ಜಿಲ್ಲಾ ರೆಡ್ ಕ್ರಾಸ್ ಘಟಕದ ಆರ್ಥಿಕ ಸಮಿತಿಗೆ ಅನಿಲ್ ಎಚ್.ಟಿ. ಅಧ್ಯಕ್ಷರಾಗಿ, ಅಂಬೆಕಲ್ ಜೀವನ್, ಸತೀಶ್ ರೈ, ಮಹಮ್ಮದ್ ಹನೀಫ್ ನಿರ್ದೇಶಕರಾಗಿಯೂ ಆಯ್ಕೆ ಯಾದರು.

ಇನ್ನೊಂದು ತಿಂಗಳಿನಲ್ಲಿ ರೆಡ್ ಕ್ರಾಸ್ ಘಟಕದ ನೂತನ ಸಮುದಾಯ ಭವನದ ಉದ್ಘಾಟನೆ ಆಯೋಜಿಸ ಲಾಗುತ್ತದೆ. ರೆಡ್ ಕ್ರಾಸ್ ಕೊಡಗಿನ ಹೆಮ್ಮೆಯ ಸಮುದಾಯ ಭವನ ಇದಾಗಲಿದೆ ಎಂದು ಸಭೆಯಲ್ಲಿ ನೂತನ ಸಭಾಧ್ಯಕ್ಷ ರವೀಂದ್ರ ರೈ ಹೇಳಿದರು. ಪ್ರಧಾನ ಕಾಯದರ್ಶಿ ಮುರಳೀಧರ್ ವಂದಿಸಿದರು.