ಮುಳ್ಳೂರು, ಮಾ. ೨೯: ತಡರಾತ್ರಿ ಲಾರಿಯೊಂದು ನಿಯಂತ್ರಣ ತಪ್ಪಿ ಮನೆಯೊಳಗೆ ನುಗ್ಗಿದ್ದು, ಅದೃಷ್ಟವಶಾತ್ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ಇಲ್ಲಿಗೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ.
ಸೋಮವಾರ ಮಧ್ಯರಾತ್ರಿ ಲಾರಿಯೊಂದರಲ್ಲಿ ಮೈಸೂರಿನಿಂದ ಶನಿವಾರಸಂತೆ ಮಾರ್ಗವಾಗಿ ಸಕಲೇಶಪುರಕ್ಕೆ ಹಸಿಮೀನು ತುಂಬಿಸಿಕೊAಡು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಗೋಪಾಲಪುರ ಗ್ರಾಮದ ಚರ್ಚ್ ಬಳಿ ಮಗುಚಿಕೊಂಡು ರಸ್ತೆ ಬದಿಯಲ್ಲಿ ಮಲ್ಲೇಶ್ ಎಂಬವರಿಗೆ ಸೇರಿದ ವಾಸದ ಮನೆಗೆ ನುಗ್ಗಿದ ಪರಿಣಾಮ ಮಲ್ಲೇಶ್ ಅವರ ಮನೆ ಜಖಂಗೊAಡಿದೆ. ಮನೆಯಲ್ಲಿ ಮಲ್ಲೇಶ್ ಸೇರಿದಂತೆ ೩ ಮಂದಿ ಕುಟುಂಬ ಸದಸ್ಯರು ಮನೆಯೊಳಗಿನ ಬೇರೆ ಕೊಠಡಿಯೊಳಗೆ ಮಲಗಿದ್ದರು. ಇದರಿಂದ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಲಾರಿ ಅಪಘಾತ ವೇಳೆ ಚಾಲಕ ಸೇರಿದಂತೆ ಲಾರಿಯಲ್ಲಿದ್ದ ೨ ಮಂದಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಸ್ಥಳೀಯರು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.