ಸೋಮವಾರಪೇಟೆ,ಮಾ.೨೯: ಸಮೀಪದ ಐಗೂರು ಗ್ರಾಮದಲ್ಲಿರುವ ಶ್ರೀ ಆದಿಶಕ್ತಿ ಮಹಾತಾಯಿ ಪಾಷಾಣಮೂರ್ತಿ ಅಮ್ಮನವರ ದೈವಸ್ಥಾನದಲ್ಲಿ ತಾ. ೩೧ರಿಂದ (ನಾಳೆಯಿಂದ) ಏಪ್ರಿಲ್ ೫ರವರೆಗೆ ೪೬ನೇ ವರ್ಷದ ದೈವ ಕೋಲ ನೇಮೋತ್ಸವ ನಡೆಯಲಿದೆ.

ತಾ. ೩೧ರಂದು ಬೆಳಿಗ್ಗೆ ೯ ಗಂಟೆಗೆ ಗಣಪತಿ ಹೋಮ, ೧೦ ಗಂಟೆಗೆ ನಾಗಪೂಜೆ, ೧೧ ಗಂಟೆಗೆ ಶುದ್ಧಿ ಪೂಜೆ, ರಾತ್ರಿ ೮ಗಂಟೆಗೆ ಅಣ್ಣಪ್ಪ ಸ್ವಾಮಿ ದರ್ಶನ, ನಂತರ ಅನ್ನದಾನ ನಡೆಯಲಿದೆ. ಏಪ್ರಿಲ್ ೧ರಂದು ಬೆಳಿಗ್ಗೆ ೫ ಗಂಟೆಗೆ ಕಳಸ ಮೆರವಣಿಗೆ, ೧೦ ಗಂಟೆಗೆ ಮಹಾಪೂಜೆ, ೧೧ ಗಂಟೆಗೆ ಹಣ್ಣುಕಾಯಿ ನೈವೇದ್ಯ ಪೂಜೆ, ೧೧.೩೦ಕ್ಕೆ ಆದಿಶಕ್ತಿ ಮಹಾತಾಯಿ ದರ್ಶನ, ಮಧ್ಯಾಹ್ನ ೧ ಗಂಟೆಗೆ ಅನ್ನದಾನ, ಸಂಜೆ ೭ ಗಂಟೆಗೆ ಭಂಡಾರ ಆಗಮನ, ೧೦ ಗಂಟೆಗೆ ಪಾಷಾಣಮೂರ್ತಿ, ಕಲ್ಲುಡ್ಕ ದೈವಗಳ ಕೋಲ, ಏಪ್ರಿಲ್ ೨ರಂದು ರಾತ್ರಿ ೧ಗಂಟೆಗೆ ಗುಳಿಗ ದೈವ ಕೋಲ, ಪಂಜುರ್ಲಿ, ಮಂತ್ರದೇವತೆ ಕೋಲ, ಧೂವಾವತಿ ಕೋಲ, ಮಹಾಮಂಗಳಾರತಿ ನಡೆಯಲಿದೆ.

ಏಪ್ರಿಲ್ ೪ರಂದು ಸಂಜೆ ೭.೩೦ಕ್ಕೆ ಗುಳಿಗ ದೈವ ಕೋಲ, ರಾತ್ರಿ ೯.೩೦ಕ್ಕೆ ಮುಗರ‍್ಲು ನೇಮ ಗರಡಿ ಇಳಿಯುವುದು, ಕಾರ್ಣಿಕ ದೈವ ಸ್ವಾಮಿ ಕೊರಗಜ್ಜ ನೇಮ, ತಾ. ೫ರಂದು ದೈವಗಳಿಗೆ ವರ್ಷಾವಧಿ ಬೇಟೆ ಪೂಜೆ, ಬೆಳಿಗ್ಗೆ ೧೦.೩೦ಕ್ಕೆ ಭದ್ರಕಾಳಿ ದೇವಿಯ ಕೋಲ, ಮಧ್ಯಾಹ್ನ ಸರ್ವ ದೈವಗಳಿಗೆ ಎಡೆ ಪ್ರಸಾದ, ೩ ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ ಎಂದು ದೇವಾಲಯದ ದೈವದರ್ಶಿ ಆನಂದ ಪೂಜಾರಿ ತಿಳಿಸಿದ್ದಾರೆ.