ಸುಂಟಿಕೊಪ್ಪ, ಮಾ.೨೮: ಕೇಂದ್ರ ಸರಕಾರ ಸ್ವಚ್ಛ ಭಾರತ ಅಭಿಯಾನಕ್ಕೆ ಒತ್ತು ನೀಡುತ್ತಿದ್ದು, ಗ್ರಾಮ ಪಂಚಾಯಿತಿಗೆ ಸ್ವಚ್ಛತೆಗಾಗಿ ಲಕ್ಷಾಂತರ ರೂ. ಅನುದಾನ ಬಿಡುಗಡೆಯಾಗುತ್ತಿದೆ. ಆದರೆ ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ರಾಶಿ ಎಲ್ಲೆಡೆ ಹರಡಿದ್ದು ಸ್ವಚ್ಛತೆ ಇಲ್ಲದಂತಾಗಿದೆ.
೭ನೇ ಹೊಸಕೋಟೆ ಗ್ರಾ.ಪಂ. ವ್ಯಾಪ್ತಿಯ ರಾಷ್ಟಿçÃಯ ಹೆದ್ದಾರಿ ಬದಿಯ ಇಕ್ಕೆಲಗಳಲ್ಲಿ, ಶಾಲೆ ಆವರಣಗಳ ಸುತ್ತ ಕಸದ ರಾಶಿ ಸುರಿಯಲಾಗುತ್ತಿದೆ. ಮಕ್ಕಳು ಪಾಠ ಪ್ರವಚನ ಆಲಿಸುವಾಗ ದುರ್ವಾಸನೆ, ಸೊಳ್ಳೆಗಳ ಕಾಟದಿಂದ ಮಕ್ಕಳ ಅನಾರೋಗ್ಯಕ್ಕೆ ತುತ್ತಾಗುವ ಭೀತಿ ಎದುರಾಗಿದೆ. ಕಲ್ಲುಕೋರೆ ರಸ್ತೆಯ ಬಳಿ ಗ್ರಾಮ ಪಂಚಾಯಿತಿಯ ಕಸದ ರಾಶಿ, ತ್ಯಾಜ್ಯವಸ್ತುಗಳ ಪ್ಲಾಸ್ಟಿಕ್ ತುಂಬಿ ಎಲ್ಲೆಡೆ ಹರಡಿದೆ. ಪಕ್ಕದಲ್ಲೇ ವಾಸದ ಮನೆಗಳಿದ್ದು ಕಸದ ರಾಶಿಯಿಂದ ಸಮಸ್ಯೆಯಾಗಿದೆ. ಕಸ ವಿಲೇವಾರಿಗಾಗಿ ಎಲ್ಲಾ ಪಂಚಾಯಿತಿಯಲ್ಲಿ ಜಾಗ ಖರೀದಿಸಿದ್ದು ಒಣ ಕಸ, ಹಸಿಕಸ, ವಿಂಗಡಿಸಿ, ಕಸವಿಲೇವಾರಿ ಘಟಕ ಸ್ಥಾಪಿಸಿ ಕಸವನ್ನು ಇಂಗಿಸುತ್ತಿರುವುದು ಕಾಣಬಹುದಾಗಿದೆ ೭ನೇ ಹೊಸಕೋಟೆ ಗ್ರಾಮದಲ್ಲಿ ಅಶುಚಿತ್ವ ತಾಂಡವಾಡುತ್ತಿದ್ದು, ರೋಗರುಜಿನಗಳಿಗೆ ಆಹ್ವಾನ ನೀಡುತ್ತಿದೆ. ಈ ಬಗ್ಗೆ ಕ್ರಮವಹಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.