ಮಡಿಕೇರಿ, ಮಾ. ೨೯: ಶ್ರೀಮಂಗಲ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ನೂತನ ಕಾರ್ಯಕಾರಿ ಸಮಿತಿ ಯನ್ನು ರಚಿಸಲಾಗಿದೆ. ಸಮಾಜದ ಆವರಣದಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು.

ಶ್ರೀಮಂಗಲ ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ನೂತನ ಕಾರ್ಯಕಾರಿ ಸಮಿತಿ -೨೦೨೨ ಅವಿರೋಧ ಆಯ್ಕೆ ಆದ ಸಮಿತಿ: ಅಧ್ಯಕ್ಷರಾಗಿ ನೆಲ್ಲಿರ ನೀನ ಪೂಣಚ್ಚ, ಉಪಾಧ್ಯಕ್ಷರಾಗಿ ಕಾಳಿಮಾಡ ಸೀಮಾ ಪ್ರಶಾಂತ್, ಕಾರ್ಯದರ್ಶಿಯಾಗಿ ಮಚ್ಚಾಮಾಡ ನಂದಿತಾ ಕಾರ್ಯಪ, ಜಂಟಿ ಕಾರ್ಯದರ್ಶಿಯಾಗಿ ಚೋನಿರ ಪವಿ ರತನ್, ಖಜಾಂಚಿಯಾಗಿ ಮಚ್ಚಾಮಾಡ ಶ್ವೇತಾ ಉದಯ್ ಆಯ್ಕೆಯಾಗಿದ್ದಾರೆ.

ಕಾನೂನು ಸಲಹೆಗಾರರಾಗಿ ವಕೀಲೆ ಪಾರುವಂಗಡ ರಿಸ್ತಾ ಚೆಂಗಪ್ಪ, ನಿರ್ದೇಶಕರುಗಳಾಗಿ ಮಚ್ಚಾಮಾಡ ರೇಶ್ಮಾ ವಿಜಯ್, ಚಂಗುಲAಡ ಲಿಖಿತ ಪೊನ್ನಪ್ಪ, ಅಜ್ಜಾಮಾಡ ಶರ್ಲಿ ನವೀನ್, ಪೆಮ್ಮಂಡ ಸಬಿತ ಕುಶಾಲಪ್ಪ, ಅಜ್ಜಮಾಡ ಸುಮನ್, ಅಜ್ಜಮಾಡ ಸಾವಿತ್ರಿ, ಕರ್ತಮಾಡ ಪ್ರತಿಮಾ, ಅಜ್ಜಾಮಾಡ ಮೋನಿಕಾ, ಬಾಚಂಗಡ ರಜಿತ ನೇಮಕಗೊಂಡಿದ್ದಾರೆ.