ಪೊನ್ನಂಪೇಟೆ, ಮಾ. ೨೮: ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟಿçÃಯ ಯುವ ಸೈನಿಕ ದಳ (ಎನ್.ಸಿ.ಸಿ.) ವಿದ್ಯಾರ್ಥಿಗಳನ್ನು ಭಾರತೀಯ ಸೈನ್ಯಕ್ಕೆ ಆಕರ್ಷಿಸಲು ಪ್ರೇರಣಾ ಶಕ್ತಿಯಾಗಿದೆ. ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿಯೂ ನಿರ್ಣಾಯಕ ಪಾತ್ರವಹಿಸುತ್ತಿದೆ ಎಂದು ಮಡಿಕೇರಿಯ ೧೯ನೇ ಕರ್ನಾಟಕ ಎನ್.ಸಿ.ಸಿ. ಬೆಟಾಲಿಯನ್ ನ ಕಮಾಂಡಿAಗ್ ಆಫೀಸರ್ ಕರ್ನಲ್ ಚೇತನ್ ಧಿಮನ್ ಹೇಳಿದರು.
ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ (ಕಾಪ್ಸ್) ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಲಾಗಿರುವ ಎನ್.ಸಿ.ಸಿ. ಹಿರಿಯರ ಘಟಕ (ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ) ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಸ್ತು, ಬದ್ಧತೆ ಮತ್ತು ಸೇವಾಮನೋಭಾವದ ಪ್ರಮುಖ ಆಶಯವನ್ನು ಹೊಂದಿರುವ ಎನ್.ಸಿ.ಸಿ., ವಿದ್ಯಾರ್ಥಿಗಳನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯಲು ಹೆಚ್ಚು ನೆರವಾಗುತ್ತಿದೆ. ಈ ಕಾರಣದಿಂದಲೇ ಎನ್.ಸಿ.ಸಿ. ಇಂದು ರಾಷ್ಟçದಾದ್ಯಂತ ಹೆಚ್ಚು ಜನಪ್ರಿಯಗೊಂಡಿದೆ. ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಎನ್.ಸಿ.ಸಿ.ಯಿಂದಲೆ ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾಪ್ಸ್ ಪ್ರಾಂಶುಪಾಲ ಡಾ. ಬೆನ್ನಿ ಕುರಿಯಕೊಸ್ ಅವರಿಗೆ ಎನ್.ಸಿ.ಸಿ. ಧ್ವಜ ಹಸ್ತಾಂತರಿಸುವ ಮೂಲಕ ಕರ್ನಲ್ ಚೇತನ್ ಧಿಮನ್ ಅವರು ಕಾಲೇಜಿನ ಹಿರಿಯರ ಎನ್.ಸಿ.ಸಿ. ಘಟಕಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪ್ಸ್ ಪ್ರಾಂಶುಪಾಲ ಡಾ. ಬೆನ್ನಿ ಕುರಿಯಕೊಸ್ ಮಾತನಾಡಿ, ಈಗಾಗಲೇ ಸಂಸ್ಥೆಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಕಿರಿಯರ ವಿಭಾಗದ ಎನ್.ಸಿ.ಸಿ. ಘಟಕ ಇಡೀ ದೇಶದಲ್ಲಿ ಮನ್ನಣೆ ಪಡೆದುಕೊಂಡಿದೆ. ಈ ಘಟಕ ತೋರಿದ ಅಸಮಾಧಾನ ಸಾಧನೆಯಿಂದಾಗಿ ಈ ಸಾಲಿನಲ್ಲಿ ತಮ್ಮ ವಿದ್ಯಾಸಂಸ್ಥೆ ಅತ್ಯುತ್ತಮ ಎನ್.ಸಿ.ಸಿ. ಶಾಲೆಯೆಂಬ ರಾಷ್ಟಿçÃಯ ಪ್ರಶಸ್ತಿ ಪಡೆಯುವಂತಾಯಿತು ಎಂದು ಹೇಳಿದರು.
ಕಾಲೇಜಿನಲ್ಲಿ ನೂತನವಾಗಿ ಹಿರಿಯರ ಎನ್.ಸಿ.ಸಿ. ಘಟಕವನ್ನು ಆರಂಭಿಸುವಲ್ಲಿ ಸಹಕಾರ ನೀಡಿದ ಕಮಾಂಡಿAಗ್ ಆಫೀಸರ್ ಕರ್ನಲ್ ಚೇತನ್ ಧಿಮನ್ ಅವರನ್ನು ವಿದ್ಯಾಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾಪ್ಸ್ನ ಎನ್.ಸಿ.ಸಿ. ಘಟಕದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ. ಬಿ.ಎಂ. ಗಣೇಶ್, ವಿದ್ಯಾಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಎನ್.ಸಿ.ಸಿ. ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಡೆಟ್ ಚಂದ್ರಪಾಲ್ ಸ್ವಾಗತಿಸಿದರು. ಕೆಡೆಟ್ ಗ್ರೀಷ್ಮಾ ಕಾರ್ಯಕ್ರಮ ನಿರೂಪಿಸಿದರು. ಕೆಡೆಟ್ ಕೆ.ಎಸ್. ಅಮೋಘ್ ವಂದಿಸಿದರು.