ಮಡಿಕೇರಿ, ಮಾ. ೨೮: ಸಂಪಾಜೆ ಗ್ರಾಮ ಪಂಚಾಯತ್‌ನಲ್ಲಿ ಸುದೀರ್ಘ ೧೭ ವರ್ಷಗಳ ವರೆಗೆ ಸೇವೆ ಸಲ್ಲಿಸಿ ಇದೀಗ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ ಲಸಿತ ಅವರಿಗೆ ಗ್ರಾಮ ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಿರ್ಮಲ ಭರತ್, ಉಪಾಧ್ಯಕ್ಷ ಜಗದೀಶ್ ಪರ್ಮಲೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾ ರಾಣಿ, ಪಂಚಾಯತ್ ಸದಸ್ಯರಾದ ಕುಮಾರ್ ಚೆದ್ಕಾರ್, ಸುರೇಶ ಪಂಜಿಕಲ್ಲು, ನವೀನ್ ಕುಮಾರ್, ರಮಾದೇವಿ ಬಾಲಚಂದ್ರ ಕಳಗಿ, ಅನಿತಾ ಚಂದ್ರಶೇಖರ್, ಪೂರ್ಣಿಮಾ ಅರೆಕಲ್ಲು, ಗ್ರಾಮ ಪಂಚಾಯತ್ ಕಾರ್ಯದರ್ಶಿಯಾದ ಸೀತಾರಾಮ, ಪಂಚಾಯತ್ ಸಿಬ್ಬಂದಿ ಹರೀಶ್ ಪಟ್ರಕೋಡಿ, ದೇವಪ್ಪ ಕುಮಾರಮಂಗಿಲ, ಪುರುಷೋತ್ತಮ ಕುಂಬಾಡಿ , ಗಣೇಶ್ ಕೊಯನಾಡು, ಚಂದ್ರಪ್ರಭಾ ಚೆರಿಯಮನೆ ಇತರರು ಹಾಜರಿದ್ದರು.