ಪೆರಾಜೆ, ಮಾ. ೨೮: ಒಂದು ತಿಂಗಳಕಾಲ ನಡೆಯುವ ನೂರೊಂದು ದೈವಗಳ ನೆಲೆಬೀಡಾಗಿರುವ ಇತಿಹಾಸ ಪ್ರಸಿದ್ಧ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ದೇವರ ಬಲಿ ಉತ್ಸವವು ಶ್ರದ್ದಾಭಕ್ತಿಯಿಂದ ನಡೆಯಿತು. ಕಲಶೋತ್ಸವ , ಮಧ್ಯಾಹ್ನ ಮಹಾಪೂಜೆ, ಮಹಾಸಮಾರಾಧನೆ, ಸಂಜೆ ಉಳ್ಳಾಗುಳ ಮಾಡದ ಅರಮನೆಯಿಂದ ಭಂಡಾರ ತರುವುದು, ಮುಖ ತೋರಣ, ಶಿಸ್ತು ಅಳೆಯುವುದು, ರಾತ್ರಿ ಗಂಟೆ ೮ರಿಂದ ಶ್ರೀ ದೇವರ ಭೂತಬಲಿ ,ದೇವರ ನೃತ್ಯ ಬಲಿ ನಂತರ ಕಟ್ಟೆಪೂಜೆ ನಡೆಯಿತು, ಮರುದಿನ ಬೆಳಿಗ್ಗೆ ದೇವರ ದರ್ಶನ ಬಲಿ , ಬಟ್ಟಲುಕಾಣಿಕೆ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ನಂತರ ರಾತ್ರಿಯಿಂದ ದೈವಗಳ ಕೋಲಗಳು ನಡೆದವು.

ಈ ಸಂದರ್ಭ ಆಡಳಿತ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ ಸಹ ಕಾರ್ಯದರ್ಶಿ ಜೋಯಪ್ಪ ನಿಡ್ಯಮಲೆ, ತಕ್ಕ ಮುಖ್ಯಸ್ಥರಾದ ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ, ಪುರುಷೋತ್ತಮ ನಿಡ್ಯಮಲೆ, ದೇವತಕ್ಕ ರಾಮಕಜೆ ರಾಜಗೋಪಾಲ, ಮಾಜಿ ಮೊಕ್ತೇಸರುಗಳು, ಸೇರಿದಂತೆ ಊರ ಪರಊರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.