ಮಡಿಕೇರಿ, ಮಾ. ೨೮: ಮಡಿಕೇರಿ ಸನಿಹದ ಕೆ. ಬಾಡಗದಲ್ಲಿ ಪ್ರಾರಂಭಗೊAಡು ನೆನೆಗುದಿಗೆ ಬಿದ್ದಿರುವ ಕೊಡವ ಹೆರಿಟೇಜ್ ಸೆಂಟರ್‌ನ ಕಾಮಗಾರಿಯನ್ನು ಇದೇ ಜುಲೈ ಮಾಸಾಂತ್ಯದೊಳಗೆ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು ಎಂಬುದಾಗಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಸುನಿಲ್ ಕುಮಾರ್ ಅವರು ಭರವಸೆ ನೀಡಿದ್ದಾರೆ.

ವಿಧಾನಪರಿಷತ್‌ನಲ್ಲಿಂದು ಈ ಕುರಿತು ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಪ್ರವಾಸೋದ್ಯಮ, ಜೀವಿಶಾಸ್ತç ಹಾಗೂ ಪರಿಸರ ಸಚಿವರಾದ ಆನಂದ್ ಸಿಂಗ್ ಅವರ ಪರವಾಗಿ ಸಚಿವ ಸುನಿಲ್ ಕುಮಾರ್ ಉತ್ತರ ಒದಗಿಸಿದರು.

೨೦೦೪ರಲ್ಲೇ ಕೇಂದ್ರ ಸರಕಾರದ ಮೂಲಕ ಮಂಜೂರಾತಿಯಾಗಿರುವ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ, ಇದಕ್ಕೆ ಮಂಜೂರಾಗಿದ್ದ ಕೋಟ್ಯಂತರ ಹಣ ಪೋಲಾಗಿದ್ದರೂ ಯೋಜನೆ ಕಾರ್ಯಗತವಾಗದೆ ಇನ್ನೂ ಕಾಡು ಪಾಲಾಗಿರುವುದಾಗಿ ವೀಣಾ ಅಚ್ಚಯ್ಯ ಅವರು ಮೇಲ್ಮನೆಯಲ್ಲಿ ಗಮನ ಸೆಳೆದರು. ಈ ವೇಳೆ ಚರ್ಚೆಯ ಸಂದರ್ಭ ಸಚಿವ ಸುನಿಲ್ ಕುಮಾರ್ ಅವರು ಮಾಹಿತಿ ನೀಡಿದರು. ಮೂರು ವರ್ಷದ ಹಿಂದೆಯೂ ತಾವು ಈ ಬಗ್ಗೆ ಪ್ರಸ್ತಾಪಿಸಿದ್ದು, ಈಗಲೂ ಅದೇ ರೀತಿಯ ಉತ್ತರವನ್ನು ಅಧಿಕಾರಿಗಳು ನೀಡಿದ್ದಾರೆ. ೨೦೧೩ರಲ್ಲಿ ಕೆಲಸ ಪ್ರಾರಂಭ ಗೊಂಡಿದ್ದು, ೨೬೮ ಲಕ್ಷಕ್ಕೆ ಕ್ರಿಯಾ ಯೋಜನೆ ಯಾಗಿದ್ದು, ಕುಶಾಲನಗರ ಮೂಲದ ಗುತ್ತಿಗೆದಾರರಿಗೆ ರೂ. ೧೭೧ ಲಕ್ಷವನ್ನು ಪಾವತಿಸಲಾಗಿದೆ. ಆದರೆ, ಇನ್ನೂ ಅರ್ಧದಷ್ಟು ಕೆಲಸ ಪೂರ್ಣಗೊಂಡಿಲ್ಲ. ಬಾಕಿಯಿರುವ ೯೬ ಲಕ್ಷದಲ್ಲಿ ಕೆಲಸವಾಗದು. ಹಳೆಯ ಗುತ್ತಿಗೆದಾರರನ್ನು ಇದೀಗ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಒಟ್ಟಾರೆಯಾಗಿ ರೂ. ೨ ಕೋಟಿಯಷ್ಟು ಹಣ ವ್ಯರ್ಥವಾಗಿದೆ ಎಂದು ವೀಣಾ ಆಕ್ಷೇಪಿಸಿದರು. ಪ್ರವಾಸೋದ್ಯಮ ಸಚಿವರು ಈ ಸ್ಥಳಕ್ಕೆ ಭೇಟಿ ನೀಡುವಂತೆಯೂ ಅವರು ಒತ್ತಾಯಿಸಿದರು. (ಮೊದಲ ಪುಟದಿಂದ) -ಸಚಿವ ಸುನಿಲ್ ಕುಮಾರ್ ಅವರು ಕೇಂದ್ರ ೨೦೦೪ರಲ್ಲಿ ಇದಕ್ಕೆ ಒಪ್ಪಿಗೆ ನೀಡಿದೆ. ಆದರೆ, ಬೇರೆ ಬೇರೆ ಕಾರಣದಿಂದಾಗಿ ತಡವಾಗಿರುವುದನ್ನು ಒಪ್ಪಿಕೊಳ್ಳುವುದಾಗಿ ಹೇಳಿದರು. ೨೦೧೮ರಲ್ಲಿ ಪರಿಷ್ಕೃತ ಅಂದಾಜು ಮಾಡಲಾಗಿದೆ. ಗುತ್ತಿಗೆದಾರರನ್ನೂ ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದರು. ಕೊಡಗಿನ ಬಗ್ಗೆ ಅಪಾರ ಗೌರವ ಸರಕಾರಕ್ಕೆ ಇದೆ. ಈ ಬಗ್ಗೆ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿದೆ. ಜುಲೈ ತಿಂಗಳ ಒಳಗೆ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದರು. ಆದರೆ, ಈ ವೇಳೆಗೆ ಮಳೆಗಾಲ ಪ್ರಾರಂಭವಾಗಿರುತ್ತದೆ ಎಂದು ವೀಣಾ ಅಚ್ಚಯ್ಯ ಆಕ್ಷೇಪಿಸಿದರಾದರೂ, ಖಂಡಿತವಾಗಿ ಜುಲೈ ತಿಂಗಳೊಳಗೆ ಕೆಲಸ ಪೂರ್ಣಗೊಳಿಸಲಾಗುವುದು. ಅಲ್ಲದೆ, ಉದ್ಘಾಟನೆಗೆ ತಮ್ಮನ್ನೂ ಆಹ್ವಾನಿಸುವುದಾಗಿ ಸಚಿವರು ಭರವಸೆಯಿತ್ತರು.