ಮಡಿಕೇರಿ, ಮಾ. ೨೮: ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆಯ ವಾರ್ಷಿಕ ಮಹಾಸಭೆ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಅಧ್ಯಕ್ಷö ಕೊಂಬನ ಪ್ರವೀಣ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮುಂದಿನ ಸಾಲಿನ ನೂತನ ಆಡಳಿತ ಮಂಡಳಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ತಳೂರು ಮಮತಾ ಹಿತೇಶ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನಾಟೋಳನ ಮಧು, ಕಾರ್ಯದರ್ಶಿಯಾಗಿ ತರುಣ್ ಕೂಡಕಂಡಿ, ಜಂಟಿ ಕಾರ್ಯದರ್ಶಿ ಕಡ್ಯದ ಮಂಜು, ಖಜಾಂಚಿಯಾಗಿ ಬಿಳಿಮಲೆ ಹರೀಶ್ ಹಾಗೂ ೧೫ ಮಂದಿ ಸದಸ್ಯರುಗಳನ್ನು ನೇಮಕ ಮಾಡಲಾಯಿತು.

ಅತಿಥಿಯಾಗಿದ್ದ ಯುವ ವೇದಿಕೆಯ ಗೌರವ ಅಧ್ಯಕ್ಷ ಹಾಗೂ ಕೊಡಗು ಗೌಡ ಸಮಾಜದ ಅಧ್ಯಕ್ಷ ಕೇಕಡ ನಾಣಯ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ೨೦೧೮ರಿಂದ ೨೦೨೨ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೊಂಬನ ಪ್ರವೀಣ್ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ಕಡ್ಯದ ಗಾನವಿ ಮಂಜು ಪ್ರಾರ್ಥಿಸಿದರೆ, ಖಜಾಂಚಿ ಕೋಳಿಬೈಲು ಪ್ರಫುಲ್ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ತರುಣ್ ಕೂಡಕಂಡಿ ವರದಿ ವಾಚಿಸಿದರೆ, ಉಪಾಧ್ಯಕ್ಷ ಕೇನೇರ ದಿನೇಶ್ ವಂದಿಸಿದರು.