ಸುಂಟಿಕೊಪ್ಪ, ಮಾ.೨೮ : ಐಗೂರಿನ ಶ್ರೀ ಆದಿಶಕ್ತಿ ಮಹಾತಾಯಿ ಮತ್ತು ಪಾಷಾಣಮೂರ್ತಿ ಅಮ್ಮನವರ ದೇವಸ್ಥಾನದ ೪೬ನೇ ವರ್ಷದ ದೈವಕೋಲ, ನೇಮೋತ್ಸವವು ತಾ. ೩೧ರಿಂದ ಏಪ್ರಿಲ್ ೫ ರವರೆಗೆ ನಡೆಯಲಿದೆ.

ತಾ. ೩೧ ರಂದು ಬೆಳಿಗ್ಗೆ ೯ ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ ೧೦ ಗಂಟೆಗೆ ನಾಗಪೂಜೆ, ೧೧ ಗಂಟೆಗೆ ಶುದ್ಧಿಪೂಜೆ, ರಾತ್ರಿ ೮ ಗಂಟೆಗೆ ಅಣ್ಣಪ್ಪಸ್ವಾಮಿ ದರ್ಶನ, ರಾತ್ರಿ ೯ಕ್ಕೆ ಅನ್ನಸಂತರ್ಪಣೆ, ಏಪ್ರಿಲ್ ೧ರಂದು ಬೆಳಿಗ್ಗೆ ೫ಗಂಟೆಗೆ ಕಳಸದ ಮೆರವಣಿಗೆ, ಬೆಳಿಗ್ಗೆ ೧೦ಕ್ಕೆ ಮಹಾಪೂಜೆ, ೧೧ಕ್ಕೆ ಹಣ್ಣುಕಾಯಿ ನೈವೇದ್ಯಪೂಜೆ,೧೧.೩೦ಕ್ಕೆ ಆದಿಶಕ್ತಿ ಮಹಾತಾಯಿ ದರ್ಶನ ಮಧ್ಯಾಹ್ನ ೧ ಗಂಟೆಗೆ ಅನ್ನದಾನ ರಾತ್ರಿ ೭ ಗಂಟೆಗೆ ಭಂಡಾರ ಆಗಮನ ರಾತ್ರಿ ೮.೩೦ಕ್ಕೆ ಅನ್ನದಾನ,ರಾತ್ರಿ ೧೦ ಗಂಟೆಗೆ ಪಾಷಾಣಮೂರ್ತಿ ಮತ್ತು ಕಲ್ಕುಡ ದೈವಗಳ ಕೋಲ, ಮಧ್ಯರಾತ್ರಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ.

ತಾ.೨ ರಂದು ಬೆಳಿಗಿನ ಜಾವ ೧ ಗಂಟೆಗೆ ಗುಳಿಗ ದೈವದ ಕೋಲ,೨.೩೦ ಗಂಟೆಗೆ ಪಂಜುರ್ಲಿ ದೈವದ ಕೋಲ, ಬೆಳಿಗ್ಗೆ ೪ ಗಂಟೆಗೆ ಮಂತ್ರದೇವತೆ ಕೋಲ, ಬೆಳಿಗ್ಗೆ ೬ ಗಂಟೆಗೆ ಧರ್ಮ ದೈವದ ಕೋಲ, ೮ ಗಂಟೆಗೆ ದೂಮಾವತಿ ದೈವದ ಕೋಲ, ಬೆಳಿಗ್ಗೆ ೧೦.೩೦ ಗಂಟೆಗೆ ಭಂಡಾರ ಆಗಮನ ೧೦.೪೫ಕ್ಕೆ ಮಹಾಮಂಗಳಾರತಿ ನಡೆಯಲಿದೆ.

ತಾ. ೪ ರಂದು ಸಂಜೆ ೭.೩೦ಕ್ಕೆ ಜಾಗದ ಗುಳಿಗ ದೈವದ ಕೋಲ, ರಾತ್ರಿ ೮.೩೦ಕ್ಕೆ ಅನ್ನದಾನ ರಾತ್ರಿ ೮.೩೦ಕ್ಕೆ ಅನ್ನದಾನ,ರಾತ್ರಿ ೯.೩೦ ಗಂಟೆಗೆ ಮುಗರ‍್ದು ನೇಮ,ಗರಡಿ ಇಳಿಸುವುದು ಮಧ್ಯರಾತ್ರಿ ತನ್ನಿಮಾನಿಗ ಗರಡಿ ಇಳಿಸುವುದು, ಬೆಳಿಗ್ಗೆ ೪ ಗಂಟೆಗೆ ಕಾರ್ಣಿಕ ದೈವ ಸ್ವಾಮಿ ಕೊರಗಜ್ಜ ನೇಮ, ಏಪ್ರಿಲ್ ೫ ರಂದು ದೈವಗಳಿಗೆ ಬೇಟಿಕೊಡುವ ಕಾರ್ಯಕ್ರಮ, ಬೆಳಿಗ್ಗೆ ೧೦.೩೦ ಗಂಟೆಗೆ ಭದ್ರಕಾಳಿ ದೇವಿಯ ಕೋಲ, ಮಧ್ಯಾಹ್ನ ಸರ್ವದೈವಗಳ ಎಡೆಪ್ರಸಾದ ವಿನಿಯೋಗ ಅಪರಾಹ್ನ ೩ ಗಂಟೆಗೆ ಮಹಾಮಂಗಳಾರತಿ, ಸಂಜೆ ೬ ಗಂಟೆಗೆ ದೈವ ನಡೆ ಮುಚ್ಚಲಾಗುವುದೆಂದು ಪಾಷಾಣಮೂರ್ತಿ ಹಾಗೂ ಆದಿಶಕ್ತಿ, ಮಹಾತಾಯಿ ದೇವಾಲಯದ ಧರ್ಮದರ್ಶಿ ಎಸ್.ಪಿ.ಆನಂದ ತಿಳಿಸಿದ್ದಾರೆ.