ಸಿದ್ದಾಪುರ, ಮಾ.೨೮: ಹಾಕತ್ತೂರು ಪ್ರೀಮಿಯರ್ ಲೀಗ್ ೮ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟ ಹಾಕತ್ತೂರು ಶಾಲಾ ಮೈದಾನದಲ್ಲಿ ನಡೆಯಿತು.

ರೋಚಕ ಫೈನಲ್ ಪಂದ್ಯಾಟವು ಫಿರೋಜ್ ಮಾಲೀಕತ್ವದ ಪೌಂಡ್ ಹಿಟ್ಟರ್ಸ್ ಹಾಗೂ ಅನಿಲ್ ಮಾಲೀಕತ್ವದ ಟೀಮ್ ೯೯ ತಂಡಗಳ ನಡುವೆ ನಡೆಯಿತು. ಪೌಂಡ್ ಹಿಟ್ಟರ್ಸ್ ತಂಡವು ರೋಚಕ ಗೆಲುವಿನೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಟೀಮ್ ೯೯ ತಂಡ ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡರೆ ಖಾದರ್ ಮಾಲೀಕತ್ವದ ಟೀಮ್ ಜಿಜಿಟಿ ಮೂರನೇ ಪ್ರಶಸ್ತಿಗೆ ಭಾಜನವಾಯಿತು. ಫೈನಲ್ ಪಂದ್ಯದ ಉತ್ತಮ ಆಟಗಾರನ ಪ್ರಶಸ್ತಿ ಸತ್ತಾರ್ ಕಲಂದರ್, ಕ್ರೀಡಾಕೂಟದ ಅತ್ಯುತ್ತಮ ಆಟಗಾರನ ಪ್ರಶಸ್ತಿ ಪೌಂಡ್ ಹಿಟ್ಟರ್ಸ್ ತಂಡದ ಜಗತ್ ದಂಬೆಕೋಡಿ ಪಡೆದುಕೊಂಡರು. ಪಂದ್ಯಾಟದಲ್ಲಿ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಪೌಂಡ್ ಹಿಟ್ಟರ್ಸ್ ತಂಡದ ಸಜನ್ ಪರ್ಲಕೋಟಿ, ಬೆಸ್ಟ್ ಬೌಲರ್ ಆಗಿ ಟೀಮ್ ೯೯ ತಂಡದ ಕಿರಣ್ ಬಹುಮಾನ ಪಡೆದುಕೊಂಡರು. ವಿನ್ನರ್ ತಂಡಕ್ಕೆ ೪೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಪಿ,ü ರನ್ನರ್ಸ್ ತಂಡಕ್ಕೆ ೨೫ ಸಾವಿರ ನಗದು ಹಾಗೂ ಟ್ರೋಫಿಯನ್ನು ನೀಡಲಾಯಿತು.