ಸುಂಟಿಕೊಪ್ಪ, ಮಾ. ೨೭: ಸುನ್ನಿ ಶಾಫಿ ಫೆಡರೇಷನ್ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಸಂವಿಧಾನ ಧರ್ಮ ರಾಜಕೀಯ ವಿಷಯದ ಆಧಾರದಲ್ಲಿ ಸೋಮವಾರಪೇಟೆ ಡಿವಿಷನ್ ಕಾನ್ಪರೆನ್ಸ್ ಸುಂಟಿಕೊಪ್ಪದ ಕೊಡವ ಸಮಾಜದಲ್ಲಿ ನಡೆಯಿತು.
ಸಮಾರಂಭವನ್ನು ಎಸ್‌ವೈಎಸ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲನಾ ಹಫೀಳ್ ಸಅದಿ ಕೊಳಕೇರಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕರ್ನಾಟಕ ಜಮಾಯಿತುಲ್ ಉಲಮಾ ಕಾರ್ಯದರ್ಶಿ ಹಾಗೂ ಉಸ್ತಾದ್ ಶೈಖುನಾ ತೋಕೆ ಅವರು ಧರ್ಮ ರಾಜಕೀಯ ವಿಷಯಗಳನ್ನು ಪ್ರಸ್ತಾಪಿಸಿ ಮಾತನಾಡಿದರು. ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಅಧ್ಯಕ್ಷ ಶಾಫಿ ಸಅದಿ ಪ್ರಾಸ್ತಾವಿಕವಾಗಿ ಸಂವಿಧಾನ ಧರ್ಮ ರಾಜಕೀಯ ವಿಷಯದ ಆಧಾರದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಮಾತನಾಡಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯ ಪಿ.ಎಂ. ಲತೀಫ್, ಎಸ್‌ಎಸ್‌ಎಫ್ ರಾಷ್ಟಿçÃಯ ಕಾರ್ಯದರ್ಶಿ ಕೊಳಕೇರಿ ಯಾಕುಬ್ ಮಾಸ್ಟರ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಎಸ್‌ಎಫ್‌ನ ಸೋಮವಾರಪೇಟೆ ಡಿವಿಷನ್ ಅಧ್ಯಕ್ಷ ಕೊಡಗರಹಳ್ಳಿಯ ಶಾಫಿ ಅನ್ವಾರಿ ಸಖಾಫಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪದ ಮಹಮದ್ ಆಲಿ, ಶೌಕತ್, ನಾಸರ್, ಉಸ್ಮಾನ್, ಸುಂಟಿಕೊಪ್ಪ ಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಮಾಸ್ಟರ್, ಹೊಸತೋಟ ಜಲೀಲ್ ಅಮಿನ್, ಪಾಲಿಬೆಟ್ಟ ನಾಸೀರ್ ಮುಸ್ಲಿಯಾರ್, ರಫೀಕ್, ಲತೀಫಿ, ನಜೀರ್ ಸಖಾಫಿ ಕುಂಜಿಲ, ಜಕ್ರಿಯ ಜೌಹರಿ ರಜಾಕ್, ಸಹದಿ ನೌಫಲ್ ಮಾಲ್ದಾರೆ, ಹನೀಫ್, ಆಶ್ರಫ್, ಸ್ವಾಗತ ಸಮಿತಿ ಅಧ್ಯಕ್ಷ ನಜ್ಮುದ್ದೀನ್ ಜಹೀರ್, ಸಖಾಫಿ ಉಸೈನ್ ಹಾಜರಿದ್ದರು.