ಸೋಮವಾರಪೇಟೆ, ಮಾ. ೨೮: ಕೊಡಗಿನ ಬೆಳೆಗಾರರ ಬಹುಕಾಲದ ಬೇಡಿಕೆಯಾಗಿದ್ದ ೧೦ ಹೆಚ್.ಪಿ.ವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಸುವ ಯೋಜನೆಗೆ ಮುಖ್ಯಮಂತ್ರಿಗಳಿAದ ಆದೇಶ ಹೊರಡಿಸುವಲ್ಲಿ ಶ್ರಮಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಕೊಡಗು ಜಿಲ್ಲಾ ರೈತ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಮನೆಹಳ್ಳಿ ಮಠದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಶಾಸಕರನ್ನು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನುಸೋಮಯ್ಯ, ಪದಾಧಿಕಾರಿಗಳಾದ ಗಣಗೂರು ಚಂದ್ರಶೇಖರ್, ಬಾಣಾವರ ರೇವಣ್ಣ, ಗೋಣಿಮರೂರು ಸಣ್ಣಸ್ವಾಮಿ, ಕೊಡ್ಲಿಪೇಟೆಯ ಪ್ರಸನ್ನ, ಚಿಕ್ಕಕುಂದ ಗ್ರಾಮದ ಕೆ.ಬಿ. ಮಹೇಶ್, ಯರಪಾರೆ ಗ್ರಾಮದ ಪಚ್ಚಪ್ಪ ಸೇರಿದಂತೆ ಇತರರು ಸನ್ಮಾನಿಸಿದರು.