ನಾಪೋಕ್ಲು, ಮಾ. ೨೭: ಧರ್ಮಸ್ಥಳ ಸಂಘದಿAದ ಮಾತೃಶ್ರೀ ಹೇಮಾವತಿ ಅಮ್ಮನವರ ಸದಾಶಯದ ಕಾರ್ಯಕ್ರಮದಲ್ಲಿ ಒಂದಾದ ವಾತ್ಸಲ್ಯ ಕಿಟ್ ವಿತರಣಾ ಕಾರ್ಯಕ್ರಮವು ಮಡಿಕೇರಿ ಯೋಜನ ಕಚೇರಿಯಲ್ಲಿ ಜರುಗಿತು.
ಈ ಸಂದರ್ಭ ಮಾತನಾಡಿದ ಕರಾವಳಿ ಪ್ರಾದೇಶಿಕ ವ್ಯಾಪ್ತಿಯ ನಿರ್ದೇಶಕರಾದ ವಸಂತ್ ಸಾಲ್ಯಾನ್ ಹೇಮಾವತಿ ಅಮ್ಮನವರ ಸದಾಶಯದ ಕಾರ್ಯಕ್ರಮವನ್ನು ವೀರಾಜಪೇಟೆ ಮತ್ತು ಮಡಿಕೇರಿ ಯೋಜನ ಕಚೇರಿ ವ್ಯಾಪ್ತಿಯ ಅರ್ಹ ಕುಟುಂಬಗಳಿಗೆ ಕಿಟನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾ ನಿರ್ದೇಶಕರಾದ ಯೋಗಿಶ್, ಯೋಜನಾಧಿಕಾರಿಗಳಾದ ಪದ್ಮಯ್ಯ, ಸುರೇಂದ್ರ, ಜನಜಾಗೃತಿ ಸದಸ್ಯರಾದ ಧನಂಜಯ ಅಗೋಲಿಕಜೆ ಮತ್ತಿತರರು ಉಪಸ್ಥಿತರಿದ್ದರು.