ವೀರಾಜಪೇಟೆ, ಮಾ. ೨೭: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ, ಇನೋವೇಟಿವ್ ಕ್ಲಬ್ (ನಾವಿನ್ಯ ಕೂಟ)ನ ವತಿಯಿಂದ ಇತ್ತೀಚೆಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ‘ಯುವಸ್ಪಂದನ' ಕೇಂದ್ರದಿAದ, "ಯುವಜನತೆಯಲ್ಲಿ ಜೀವನ ಕೌಶಲ್ಯಗಳು" ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಮತ್ತು ಆಪ್ತ ಸಮಾಲೋಚನಾ ಸಮಿತಿಯ ಸಂಚಾಲಕಿ ಸುನೀತಾ ಎಂ.ಎನ್. ಅವರು ಉದ್ಘಾಟಿಸಿ, ಬದುಕಿನಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರತಿಯೊಬ್ಬರಿಗೆ ಜೀವನ ಕೌಶಲ್ಯಗಳ ಅರಿವು ಅಗತ್ಯ ಎಂದು ವಿವರಿಸಿದರು. ಜಿಲ್ಲಾ ಯುವ ಸ್ಪಂದನಾ ಕೇಂದ್ರದ ಯುವಪರಿವರ್ತಕ ಕಾರ್ತಿಕ್ ಮಾತನಾಡಿ, ಯುವ ಜನರಿಗೆ ಜೀವನ ಕೌಶಲ್ಯಗಳಾದ ಸ್ವ ಅರಿವು, ಸಹಾನುಭೂತಿ, ಭಾವನೆಗಳ ನಿರ್ವಹಣೆ, ಒತ್ತಡ ನಿಭಾಯಿಸುವಿಕೆ, ಅಂತರ ವ್ಯಕ್ತಿಯ ಕೌಶಲ, ಸಂವಹನಾ ಕೌಶಲ, ನಿರ್ಧಾರ ಕೈಗೊಳ್ಳುವ ಕೌಶಲ್ಯಗಳನ್ನು ತಿಳಿಸುವ ಮೂಲಕ, ಸಮಾಜದಲ್ಲಿ ಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡಲು ಯುವಸ್ಪಂದನ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು. ಕಾಲೇಜಿನ ಕ್ಷೇಮಪಾಲನಾ ಮತ್ತು ಆಪ್ತ ಸಮಾಲೋಚನಾ ಸಮಿತಿಯ ಸಂಚಾಲಕಿ ಸುನೀತಾ ಎಂ.ಎನ್., ಇನೋವೇಟಿವ್ ಕ್ಲಬ್ (ನಾವಿನ್ಯ ಕೂಟ)ದ ಸಂಚಾಲಕಿ ದಿವ್ಯ ಎಂ.ಬಿ., ಕ್ರೀಡಾ ಸಮಿತಿ ಸಂಚಾಲಕಿ ರಾಖೀ ಪೂವಣ್ಣ ಮಾತನಾಡಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ಶಮನ ಅವರು ನಿರೂಪಿಸಿ, ತಾಜುದ್ದೀನ್ ವಂದಿಸಿದರು.