ಪೊನ್ನಂಪೇಟೆ, ಮಾ. ೨೭: ಪೊನ್ನಂಪೇಟೆ ಶ್ರೀ ಮುತ್ತಪ್ಪ ದೇವರ ಉತ್ಸವ ತಾ. ೨೮ ರಿಂದ ೩೧ ರವರೆಗೆ ನಡೆಯಲಿದೆ. ತಾ. ೨೮ ರ ಸೋಮವಾರ ಬೆಳಿಗ್ಗೆ ೬ ಕ್ಕೆ ಗಣಪತಿ ಹೋಮ, ೮ ಗಂಟೆಗೆ ಧ್ವಜಾರೋಹಣ, ಸಂಜೆ ೬ ಕ್ಕೆ ದುರ್ಗಾಪೂಜೆ, ರಾತ್ರಿ ೯ ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ತಾ. ೨೯ ರಂದು ಸಂಜೆ ೪.೩೦ಕ್ಕೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, ೫ ಗಂಟೆಗೆ ಗುಳಿಗ ದೇವರ ವೆಳ್ಳಾಟಂ, ೭.೩೦ ಕ್ಕೆ ಗುರು ಕಾರಣ ವೆಳ್ಳಾಟಂ, ೮.೩೦ ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ ನಡೆಯಲಿದೆ. ತಾ.೩೦ ರಂದು ಸಂಜೆ ೪.೩೦ ಕ್ಕೆ ಮುತ್ತಪ್ಪ ದೇವರ ಮಲೆ ಇಳಿಸುವುದು, ಸಂಜೆ ೫ ಕ್ಕೆ ಕುಟ್ಟಿಚಾತ ದೇವರ ವೆಳ್ಳಾಟಂ, ೬.೩೦ ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ, ರಾತ್ರಿ ೯.೩೦ಕ್ಕೆ ಅನ್ನ ಸಂತರ್ಪಣೆ, ೧೦ ಕ್ಕೆ ಗುಡಿವಿರನ್ ಕಳರಿಪಯಟ್, ೧೧ ಕ್ಕೆ ಮುತ್ತಪ್ಪ ದೇವರ ಕಳಿಗ ಪಾಟ್, ೧೨ ಕ್ಕೆ ವಸೂರಿ ಮಾಲ ದೇವರ ವೆಳ್ಳಾಟಂ ನಡೆಯಲಿದೆ.
ತಾ. ೩೧ ರಂದು ಬೆಳಿಗ್ಗೆ ೨ ಗಂಟೆಗೆ ಶ್ರೀ ಭಗವತಿ ದೇವರ ವೆಳ್ಳಾಟಂ ಮತ್ತು ಕಳಸ ಪ್ರದಕ್ಷಣೆ, ಬೆಳಿಗ್ಗೆ ೩ ಕ್ಕೆ ಗುಳಿಗ ದೇವರ ಕೋಲ, ೪.೩೦ ಕ್ಕೆ ಗುರುವಿನ ಕೋಲ, ೫.೩೦ಕ್ಕೆ ಕುಟ್ಟಿಚಾತನ್ ಮತ್ತು ಮುತ್ತಪ್ಪ ದೇವರ ತಿರುಮುಡಿ, ಬೆಳಿಗ್ಗೆ ೧೦ ಗಂಟೆಗೆ ಶ್ರೀ ವಸೂರಿ ಮಾಲ ದೇವರ ಕೋಲ, ಮಧ್ಯಾಹ್ನ ೧೨ ಕ್ಕೆ ಶ್ರೀ ಭಗವತಿ ದೇವರ ಕೋಲ, ೧ ಗಂಟೆಗೆ ಗುಳಿಗ ದೇವರಿಗೆ ಕೋಳಿ ಹರಕೆ ನಡೆಯಲಿದೆ ಎಂದು ಪೊನ್ನಂಪೇಟೆ ಮುತ್ತಪ್ಪ ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.