ಕಣಿವೆ, ಮಾ. ೨೮: ರಾಷ್ಟçಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಆಯ್ಕೆಯಾಗಿದ್ದ ಕೂಡಿಗೆಯ ಸರ್ಕಾರಿ ಕ್ರೀಡಾ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಹೆಚ್.ವಿ. ಚಿಂತನ್‌ಗೆ ಕುಶಾಲನಗರದ ಗೆಳೆಯರ ಬಳಗದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಕುಶಾಲನಗರದ ಪೊಲೀಸ್ ಉಪ ಅಧೀಕ್ಷಕರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಷಟಲ್ ಬ್ಯಾಡ್ಮಿಂಟನ್ ಗೆಳೆಯರು ಉದಾರವಾಗಿ ನೀಡಿದ ನಗದು ಬಹುಮಾನವನ್ನು ನೀಡುವ ಮೂಲಕ ಡಿವೈಎಸ್ಪಿ ಶೈಲೇಂದ್ರ ಹಾಗೂ ವೃತ್ತ ನಿರೀಕ್ಷಕ ಎಂ. ಮಹೇಶ್ ಅವರುಗಳ ಸಮ್ಮುಖದಲ್ಲಿ ಸಾಧಕ ಕ್ರೀಡಾಪಟು ಚಿಂತನ್ ಅವರನ್ನು ಗೌರವಿಸಿ, ಬೀಳ್ಕೊಡಲಾಯಿತು.
ಈ ಸಂದರ್ಭ ಮಾತನಾಡಿದ ಡಿವೈಎಸ್ಪಿ ಶೈಲೇಂದ್ರ, ಕ್ರೀಡೆಯಲ್ಲಿ ಸಾಧನೆ ತೋರುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿರುವ ಗ್ರಾಮೀಣ ಪ್ರತಿಭೆ ಚಿಂತನ್ ಅವರ ಸಾಧನೆಯನ್ನು ಗೌರವಿಸಿ ಸ್ನೇಹಿತರ ಬಳಗ ತೋರುತ್ತಿರುವ ಅಭಿಮಾನದ ಪ್ರೋತ್ಸಾಹದಿಂದ ಚಿಂತನ್ ರಾಷ್ಟçಮಟ್ಟದಲ್ಲಿ ಸಾಧನೆ ತೋರಲಿ ಎಂದು ಹಾರೈಸಿದರು. ರಾಷ್ಟಿçÃಯ ಗುಡ್ಡಗಾಡು ಓಟದ ಸ್ಪರ್ಧೆ ನಾಗಾಲ್ಯಾಂಡ್ ರಾಜ್ಯದ ಕೊಹಿಮಾದಲ್ಲಿ ನಡೆಯುತ್ತಿದೆ.
ಈ ಸಂದರ್ಭ ಗೆಳೆಯರ ಬಳಗದ ಪ್ರಮುಖರಾದ ಕೆ.ಎಸ್. ಮೂರ್ತಿ, ರಕ್ಷಿತ್, ಅರುಣಕುಮಾರ್, ವಿಮಲ್, ವಿ.ಜಿ. ಲೋಕೇಶ್, ಚಂದ್ರು, ರಾಜೇಶ್, ಕ್ರೀಡಾಪಟು ಚಿಂತನ್ ಪೋಷಕರಾದ ವಾಸುದೇವ್ ಹಾಗೂ ಸುಮಾ ವಾಸುದೇವ್ ಮೊದಲಾದವರಿದ್ದರು.