ಮಡಿಕೇರಿ, ಮಾ. ೨೫: ಮಹಿಳೆಯರು ಪರಾವಲಂಬಿಗಳಾಗದೆ ಸ್ವಾವಲಂಬಿಗಳಾದರೆ ಮಾತ್ರ ಮಹಿಳಾ ಶೋಷಣೆಯನ್ನು ಅರ್ಥಪೂರ್ಣ ವಾಗಿ ಪ್ರಶ್ನಿಸಲು ಸಾಧ್ಯವಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಪ್ರಾಧಾನ್ಯತೆ ನೀಡಬೇಕಿರು ವುದು ಇಂದಿನ ಜರೂರಾಗಿದೆ ಎಂದು ಮಡಿಕೇರಿ ಪೊಲೀಸ್ ಉಪನಿರೀಕ್ಷಕ ಗಜೇಂದ್ರ ಪ್ರಸಾದ್ ಅವರು ಅಭಿಪ್ರಾಯಪಟ್ಟರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣಾ ಮಾಸದ ಭಾಗವಾಗಿ ಕಾಲೇಜಿನ ಮಹಿಳಾ ಘಟಕ, ಲೈಂಗಿಕ ದೌರ್ಜನ್ಯ ನಿವಾರಣ ಘಟಕ ಮತ್ತು ಸಮಾಜಶಾಸ್ತç ವಿಭಾಗದ ವತಿಯಿಂದ ‘ಲಿಂಗ ಸಮಾನ ಕಾರ್ಯಸ್ಥಳದ ಅಗತ್ಯತೆ’ ಕುರಿತು ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ನಡೆಯುತ್ತಿರುವ ಅನೇಕ ಘಟನೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದರೂ, ಸಾಮಾಜಿಕವಾಗಿ ಸಮ್ಮತಿಯಾಗಿದೆ. ಮಹಿಳಾ ಹಕ್ಕು ಮತ್ತು ಸ್ವಾಭಿಮಾನದ ರಕ್ಷಣೆಗೆ ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿದ್ದು, ಇವುಗಳ ರಕ್ಷಣೆಗೆ ಸೂಕ್ತ ಸಾಕ್ಷಾಧಾರಗಳು ಲಭ್ಯವಿದ್ದರೆ ಮಾತ್ರ ಮಹಿಳೆಯರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದಾಗಿದೆ ಎಂದು ಮೈಸೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ನಡೆದ ಪ್ರಕರಣ ವೊಂದನ್ನು ಉದಾಹರಿಸಿ ವಿವರಿಸಿದರು. ಅಲ್ಲದೆ, ಪೊಲೀಸ್ ಇಲಾಖೆ ಯಿಂದ ಮಹಿಳೆಯರ ಹಕ್ಕು ರಕ್ಷಣೆಗೆ ‘ಸಖಿ’ ಎನ್ನುವ ವಿಶೇಷ ಘಟಕವಿದ್ದು ಅದರ ಮುಖಾಂತರವೂ ಮಹಿಳೆ ಯರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮುಂದಾಗ ಬಹುದಾಗಿದೆ. ಮರ್ಯಾದೆಗೆ ಅಂಜಿಕೊAಡು ತಮ್ಮ ಮೇಲೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಧ್ವನಿಯೆತ್ತದಿದ್ದರೆ ಅಪರಾಧಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆಯೇ ಹೊರತು ಯಾವುದೇ ಕಾರಣಕ್ಕೂ ಕಡಿವಾಣ ಹಾಕಿದಂತಾಗುವುದಿಲ್ಲ. ಇಂದು ಸಂವಹನ ತಂತ್ರಜ್ಞಾನ ಸಾಕಷ್ಟು ಬೆಳೆದಿರುವುದರಿಂದ ಮಹಿಳೆಯರ ಆತ್ಮಗೌರವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದ ರೀತಿಯಲ್ಲಿ ವಿಚಾರಣೆ ನಡೆಸುವ ಪ್ರಕ್ರಿಯೆಗಳನ್ನು ಪೊಲೀಸ್ ಇಲಾಖೆ ಅಳವಡಿಸಿ ಕೊಂಡಿರುವುದರಿAದ, ಹಾಗೂ ಇದರ ಬಗ್ಗೆ ಮಹಿಳೆಯರು ತಿಳಿದು ಕೊಳ್ಳುವುದರಿಂದ, ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಅನು ಕೂಲವಾಗುತ್ತದೆ ಎಂದು ಕಿವಿಮಾತು ಹೇಳಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅನುಭವಿ ವಕೀಲ ನಿರಂಜನ್, ಮಹಿಳೆಯರ ರಕ್ಷಣೆಗಿರುವ ಕಾನೂನುಗಳ ಕುರಿತು ಮಾಹಿತಿ ನೀಡಿ ವಿವಿಧ ಪ್ರಕರಣಗಳನ್ನು ಉದಾಹರಿಸಿದರು.

ಕಾನೂನಿನ ಕುರಿತು ಅಜ್ಞಾನದಿಂದಿರುವುದಕ್ಕೆ ಯಾವುದೇ ರೀತಿಯ ಕ್ಷಮೆಯಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ವಿದ್ಯಾವಂತರು ಕಾನೂನಿನ ಕುರಿತ ಜ್ಞಾನವನ್ನು ಇತರರಿಗೂ ಮನವರಿಕೆ ಮಾಡಿಕೊಡುವ ಮೂಲಕ ಸಂತ್ರಸ್ತರ ನೆರವಿಗೆ ಮುಂದಾಗಬೇಕು ಎಂದು ಕರೆ ನೀಡಿ, ಯಾವುದೇ ರೀತಿ ಯಲ್ಲಿಯೂ ಕಾನೂನು ದುರು ಪಯೋಗವಾಗಲು ಅವಕಾಶ ಮಾಡಿ ಕೊಡಬಾರದು ಎಂದು ತಿಳಿಸಿದರು.

ಹತ್ತು ಜನರಿಗಿಂತ ಹೆಚ್ಚು ಜನರು ಕೆಲಸ ಮಾಡುತ್ತಿರುವ ಯಾವುದೇ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ಇರಬೇಕು ಎಂಬ ನಿಯಮವಿದ್ದು, ಈ ಆಂತರಿಕ ದೂರು ಸಮಿತಿಯ ಸಾಕ್ಷಾಧಾರಗಳು ಅಪರಾಧಿಗೆ ಶಿಕ್ಷೆ ವಿಧಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿ ವಿವಿಧ ಪ್ರಕರಣಗಳನ್ನು ಉದಾಹರಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ನಾತಕೋತ್ತರ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ. ನಯನ ಕಶ್ಯಪ್, ಸ್ತಿçÃವಾದವೆಂಬುದು ಪುರುಷ ವಿರೋಧಿ ಧೋರಣೆಯಲ್ಲ, ಬದಲಾಗಿ ಪುರುಷ ಮತ್ತು ಮಹಿಳೆಯರ ಬಂಧಮುಕ್ತಗೊಳಿಸುವ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಬೆಳೆಯುವುದರೊಂದಿಗೆ ಸಮಾಜವನ್ನು ಮುನ್ನಡೆಸಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ, ಕಾಲೇಜಿನಲ್ಲಿ ವಿವಿಧ ಹಕ್ಕು ರಕ್ಷಣಾ ಸಮಿತಿಗಳಿದ್ದು, ಆ ಮೂಲಕ ಮಹಿಳೆ ಮತ್ತು ಪುರುಷ ಸಮಾನತೆಯನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ಅನುಸರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಮಹಿಳಾ ಹಕ್ಕುಗಳ ಕುರಿತು ಜ್ಞಾನ ಹೆಚ್ಚಿಸಲು ಇರುವ ಪುಸ್ತಕಗಳನ್ನು ಕಾಲೇಜಿನ ಗ್ರಂಥಾಲಯದ ಸಹ ಯೋಗದೊಂದಿಗೆ ಪ್ರದರ್ಶಿಸಲಾಗಿತ್ತು.

ಕಾರ್ಯಕ್ರಮದ ಅತಿಥಿಗಳನ್ನು ಕನ್ನಡ ವಿಭಾಗದ ಮುಖ್ಯಸ್ಥೆ ಹಾಗೂ ಕಾಲೇಜು ಮಹಿಳಾ ಘಟಕದ ಸಂಯೋಜಕಿ ಡಾ. ಲಕ್ಷಿö್ಮÃದೇವಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳನ್ನು ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಕಾಂಚನ ಪರಿಚಯಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಎಂ.ಪಿ. ಮುತ್ತಮ್ಮ ನಿರೂಪಿಸಿದರು. ಸಮಾಜಶಾಸ್ತç ವಿಭಾಗದ ಮುಖ್ಯಸ್ಥೆ ಡಾ. ಎ.ಎನ್. ಗಾಯತ್ರಿ ವಂದಿಸಿದರು.

ಹಿಂದಿ ವಿಭಾಗದ ಪ್ರಾದ್ಯಾಪಕ ಡಾ. ಶ್ರೀಧರ ಹೆಗಡೆ, ಇತಿಹಾಸ ವಿಭಾಗದ ಪ್ರಾದ್ಯಾಪಕÀ ಮೇಜರ್ ಡಾ. ರಾಘವ. ಬಿ., ಇಂಗ್ಲೀಷ್ ಪ್ರಾದ್ಯಾಪಕ ಪೂಣಚ್ಚ, ರಾಜ್ಯಶಾಸ್ತç ಪ್ರಾದ್ಯಾಪಕ ಡಾ. ಶಹಬರ್ ಪಾಷಾ, ಇತಿಹಾಸ ಪ್ರಾದ್ಯಾಪಕ ಡಾ. ಮಹದೇವಯ್ಯ, ಗ್ರಂಥಪಾಲಕಿ ಡಾ. ವಿಜಯಲತಾ ಸೇರಿದಂತೆ ಕಾರ್ಯಕ್ರಮ ಆಯೋಜನಾ ಸಮಿತಿ ಸದಸ್ಯರಾದ ಸಸ್ಯಶಾಸ್ತç ಉಪನ್ಯಾಸಕಿ ದೇವಮ್ಮ, ಹಿಂದಿ ಉಪನ್ಯಾಸಕಿ ಖುರ್ಷಿದಾ ಬಾನು, ಗಣಕ ವಿಜ್ಞಾನ ಉಪನ್ಯಾಸಕ ಮಂಜುನಾಥ್, ಪತ್ರಿಕೋದ್ಯಮ ಉಪನ್ಯಾಸಕ ಇಳಯರಾಜ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ಸ್ಮಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.