ಸೋಮವಾರಪೇಟೆ, ಮಾ. ೨೫: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘದ ೨೦೨೨-೨೭ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಇದ್ದ ಸಮಿತಿಯ ಬಹುತೇಕ ಪದಾಧಿಕಾರಿಗಳು ಮರು ಆಯ್ಕೆಗೊಂಡಿದ್ದಾರೆ.

ಮಹಿಳಾ ಸಮಾಜದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬೆಳಿಗ್ಗೆ ೯ ಗಂಟೆಯಿAದಲೇ ಸದಸ್ಯ ಮತದಾರರು ಮತ ಚಲಾಯಿಸಿದರು. ಸಂಜೆ ೪ ಗಂಟೆಯ ನಂತರ ಮತ ಎಣಿಕೆ ನಡೆಯಿತು.

ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿ.ಎಂ. ರಾಮ್‌ಪ್ರಸಾದ್, ಬಿ.ಪಿ. ಶಿವಕುಮಾರ್, ಹೆಚ್.ಕೆ. ಮಾದಪ್ಪ, ಎನ್.ಟಿ. ಪರಮೇಶ್, ಮೃತ್ಯುಂಜಯ, ಬಿ.ಡಿ. ಮಂಜುನಾಥ್, ಎಂ. ಶ್ರೀಕಾಂತ್, ಎಂ.ಸಿ. ರಾಘವ, ಎಂ.ಜೆ. ದರ್ಶನ್, ಹಾಗೂ ಮಹಿಳಾ ಮೀಸಲಾತಿಯಲ್ಲಿ ಸಿ.ಎನ್. ಶೋಭಿತ, ರೂಪ ಜಯಗಳಿಸಿದರು. ಅವಿರೋಧವಾಗಿ ಬಿ. ಶಿವಪ್ಪ, ವೆಂಕಪ್ಪ, ಕೆ.ಬಿ. ಸುರೇಶ್ ಹಾಗೂ ದಿವ್ಯ ಆಯ್ಕೆಯಾದರು.

ಚುನಾವಣೆ ಪ್ರಕ್ರಿಯೆಯನ್ನು ಕೊಡಗು ಜಿಲ್ಲಾ ಸಹಕಾರ ನೋಂದಣಿ ಇಲಾಖೆಯ ಅಧಿಕಾರಿ ಮೋಹನ್ ನಡೆಸಿದರು.