ಶ್ರೀಮಂಗಲ, ಮಾ. ೨೫: ಟಿ. ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಹರಿಹರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮನ್ನೆರ ಕ್ರಿಕೆಟ್ ಕೊಡವ ಕೌಟುಂಬಿಕ ಪಂದ್ಯಾವಳಿಯ ೪ನೇ ದಿನವಾದ ಶುಕ್ರವಾರದ ಪಂದ್ಯದಲ್ಲಿ ೮ ತಂಟಗಳು ಮುನ್ನಡೆ ಸಾಧಿಸಿದವು.
ತೀತಿರ(ಹರಿಹರ) (೪೭/೪) ತಂಡದ ವಿರುದ್ಧ ಮಲ್ಲಂಡ ತಂಡ ಗೆಲುವು ಸಾಧಿಸಿತು. ಅಪ್ಪರಂಡ ತಂಡವು(೭೩/೨) ಚಂಗುಲAಡ ತಂಡ (೭೩/೬) ಸಮ ರನ್ ಗಳಿಸಿದ ಹಿನ್ನಲೆ ಸೂಪರ್ ಓವರ್ ನಲ್ಲಿ ಅಪ್ಪರಂಡ ತಂಡ ಜಯ ಸಾಧಿಸಿತು. ಮಚ್ಚಮಾಡ ತಂಡ (೫೬/೧) ವಿರುದ್ಧ ಬೊಟ್ಟಂಗಡ (೬೦/೨) ತಂಡ ಜಯ ಸಾಧಿಸಿತು.
ಪೆಮ್ಮಂಡ ತಂಡದ (೩೦/೩) ವಿರುದ್ಧ ಮಾಪಣಮಾಡ (೩೩/೫) ತಂಡ ಜಯ ಸಾಧಿಸಿತು. ಪೆಮ್ಮಣಮಾಡ (೭೦/೨) ವಿರುದ್ದ ಕರ್ತಮಾಡ (೭೧/೪) ಗೆಲುವು ಪಡೆಯಿತು. ಪಂದ್ಯAಡ ತಂಡವು (೪೮/೬) ಕರ್ತಮಾಡ (೧೩/೯) ತಂಡದ ವಿರುದ್ಧ ಗೆಲುವು ಸಾಧಿಸಿತು. ಕಾಣತಂಡ(೩೯/೧ )ತಂಡವು ಮಾಪಣಮಾಡ (೩೦/೪ ) ತಂಡದ ವಿರುದ್ಧ ಗೆಲುವು ಸಾಧಿಸಿತು.ಮಲ್ಲಂಡ ತಂಡ (೨೪/೯)ವಿರುದ್ಧ ಬೊಟ್ಟಂಗಡ ತಂಡ (೨೬/೧) ಗೆಲುವು ಸಾಧಿಸಿತು.
 
						