ನಾಪೋಕ್ಲು, ಮಾ. ೨೫: ನಾಪೋಕ್ಲು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ ಸಂಪನ್ನ ಗೊಂಡಿತ್ತು. ತಾ. ೧೭ ರಂದು ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ನಂತರ ಅಂದಿಬೊಳಕು, ರಾತ್ರಿ ಶ್ರೀ ಭದ್ರಕಾಳಿ ದೇವರ ಕೋಲ ನಡೆಯಿತು. ತಾ. ೧೮ ರಂದು ದೇವರ ಊರ ಪ್ರದಕ್ಷಿಣೆ, ತಾ. ೧೯ ರಂದು ಎತ್ತುಪೋರಾಟ. ಪವಿತ್ರ ಪಟ್ಟಣಿ ಹಬ್ಬ ಮಹಾಪೂಜೆ ಭಕ್ತರಿಗೆ ಪ್ರಸಾದ ವಿತರಣೆ ಬಳಿಕ ಅನ್ನಸಂರ್ಪಣೆ ನಡೆಯಿತು. ತಾ. ೨೦ ರಂದು ಪವಿತ್ರ ಕಾವೇರಿ ನದಿಯಲ್ಲಿ ಭಗವತಿ ದೇವರ ಜಳಕ ಮತ್ತು ನಗರದಲ್ಲಿ ಮೆರವಣಿಗೆ, ನಂತರ ದೇವಾಲಯದಲ್ಲಿ ದೇವರ ನೃತ್ಯಬಲಿ ಜರುಗಿತು. ಅರ್ಚಕ ಹರೀಶ್ ಕೇಕ್ನುಯ, ತಂತ್ರಿ ಗಿರೀಶ್ ಹಾಗೂ ವಿನೋದ್, ಜಯಚಂದ್ರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ನಂತರ ರಾತ್ರಿ ವಿವಿಧ ದೇವರುಗಳಾದ ನರಿಪೂಧ, ನುಚ್ಚುಟೆ, ಅಂಜಿ ಕೂಟ್ ಮೂರ್ತಿ ದೇವರ ಕೋಲ ನಡೆದು ತಾ. ೨೧ ರಂದು ಕಲಿಯಾಟ ಅಜ್ಜಪ್ಪ ಮತ್ತು ವಿಷ್ಣು ಮೂರ್ತಿ ದೇವರ ಕೋಲ ನಡೆದು ಅನ್ನದಾನದೊಂದಿಗೆ ಹಬ್ಬವು ಸಂಪನ್ನ ಗೊಂಡಿತು. ಈ ಸಂದರ್ಭ ಉತ್ಸವದಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು ಆಡಳಿತ ಮಂಡಳಿ, ಊರಿನ, ಪರ ಊರಿನ ಭಕ್ತರು ಪಾಲ್ಗೊಂಡಿದ್ದರು.