ಮುಳ್ಳೂರು, ಮಾ೨೫: ದೇಶೀಯ ಗೋವುಗಳ ಸಂರಕ್ಷಣೆ ಮತ್ತು ಭೂಮಿಯಲ್ಲಿ ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವುದರಿಂದ ದೇಶ ಬಲಿಷ್ಠಗೊಳ್ಳುವುದರೊಂದಿಗೆ ನಾಗರಿಕರು ಬಲಶಾಲಿಯಾಗುತ್ತಾರೆ’ ಎಂದು ಮಹಾರಾಷ್ಟçದ ಕನ್ನೇರಿಸಿದ್ದಗಿರಿ ಮಠಾದೀಶ ಶ್ರೀ ಅದೃಶ್ಯ ಕಾಡು ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಅಂಕನಹಳ್ಳಿ ಸಮೀಪದ ಶ್ರೀ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ ಕಳೆದ ೨ ದಿನಗಳಿಂದ ನಡೆಯುತ್ತಿರುವ ರಾಜ್ಯ ಮಟ್ಟದ ಸಾವಯವ ಕೃಷಿ ಹಾಗೂ ಗೋವುಗಳ ಸಮ್ಮೇಳನದ ಕುಲ ಗೋವುಗಳ ಪ್ರದರ್ಶನ ಮತ್ತು ಗೋವುಗಳಿಗೆ ಮೇವು ನೀಡುವ ಅಧಿವೇಶನ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.

ಸ್ಥಳೀಯ ಗೋವು ಸಾಕಾಣಿಕೆಯಿಂದ ಹಲವು ರೀತಿಯ ಪ್ರಯೋಜನಗಳು ದೊರೆಯಲಿದ್ದು, ಜಾನುವಾರುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ರೋಗಗಳಿಂದ ದೂರವಿರಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಹಸುವಿನಿಂದ ದೊರೆಯುವ ಹಾಲು, ಮೊಸರು, ಮಜ್ಜಿಗೆ, ತುಪ್ಪ ಉಪಯೋಗಿಸುವು ದರಿಂದ ಹಲವು ರೋಗಗಳಿಗೆ ಮದ್ದಾಗಿದೆ. ಜೊತೆಗೆ ಜಾನುವಾರುಗಳ ಸಗಣಿಯನ್ನು ಭೂಮಿಗೆ ಬಳಸುವುದರಿಂದ ರೋಗ ಮುಕ್ತ ಆಹಾರ ಪದಾರ್ಥ ಬೆಳೆಯಬಹು ದಾಗಿದೆ. ಇದರಿಂದ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಆದ್ದರಿಂದ ಪ್ರತಿಯೊಂದು ಕುಟುಂಬದಲ್ಲಿ ಜಾನುವಾರು ಸಾಕಾಣಿಕೆ ಮಾಡಿದಲ್ಲಿ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿದೆ ಎಂದು ಅವರು ಹೇಳಿದರು.

ಜಾನುವಾರು ಸೆಗಣಿಯನ್ನು ಭೂಮಿಗೆ ಬಳಸುವುದರಿಂದ ಭೂಮಿ ಫಲವತ್ತತೆಯನ್ನು ಕೊಡುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯ ಆಹಾರ ಉತ್ಪಾದನೆ ಮಾಡಬಹುದಾಗಿದೆ ಎಂದರು.

ರಾಸಾಯನಿಕ ಗೊಬ್ಬರ ಬಳಸಿ ಆಹಾರ ಪಡೆಯುತ್ತಿರುವುದರಿಂದ ಔಷಧಿ ಇಲ್ಲದ ಮನೆ ಊಹಿಸಿಕೊಳ್ಳುವುದು ಅಸಾಧ್ಯವಾಗಿದೆ. ಆದ್ದರಿಂದ ಗೋವುಗಳಿಂದ ದೊರೆಯುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತಾಗ ಬೇಕು ಎಂದು ಸ್ವಾಮೀಜಿ ಅವರು ತಿಳಿಸಿದರು.

ರಾಷ್ಟಿçÃಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖರಾದ ಮಂಗೇಶ್ ಬೆಂಡೆ ಜೀ ಅವರು ಮಾತನಾಡಿ ದೇಶೀಯ ಜಾನುವಾರುಗಳ ಸಂರಕ್ಷಣೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ದೇಶೀಯ ಜಾನುವಾರುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಪಾಶ್ಚಾತ್ಯ ಸಂಸ್ಕೃತಿಯಿAದ ಹೊರ ಬರಬೇಕು. ರಾಷ್ಟçದ ಮಣ್ಣಿನ ಗುಣ ಉಳಿಸಬೇಕು. ಆಧುನಿಕ ಕೃಷಿ ಪದ್ಧತಿಯಿಂದ ಬಂಜರು ಭೂಮಿ ಮಾಡಬಾರದು. ಇದರ ಬದಲಾಗಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಮಿಶ್ರ ಬೆಳೆ ಬೆಳೆಯುವಂತಾಗಬೇಕು. ಪಾರಂಪರಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ದೇಶೀಯ ಜಾನುವಾರು ತಳಿಗಳನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ಅವರು ಕರೆ ನೀಡಿದರು.

ಕರ್ನಾಟಕ ಸಾವಯವ ಕೃಷಿ ಮಿಷನ್‌ನ ರಾಜ್ಯ ಅಧ್ಯಕ್ಷ ಎ.ಎಸ್.ಆನಂದ್‌ಜೀ ಅವರು ಮಾತನಾಡಿ ಕೃಷಿಕರು, ರೈತರು ಎಂದರೆ ಗೋವುಗಳು ಇರಬೇಕು. ಹಾಗಿದ್ದಾಗ ಮಾತ್ರ ಕೃಷಿಕರು ಎನ್ನಲು ಸಾಧ್ಯ. ಗೋವು ಇದ್ದಲ್ಲಿ ಕೃಷಿಗೆ ಮಹತ್ವ ಇರುತ್ತದೆ ಎಂದರು.

ಗೋವುಗಳು ಕೃಷಿಕರ ಬದುಕಿನಲ್ಲಿ ಒಡನಾಟ ಹೊಂದಿವೆ. ಅದನ್ನು ಮುಂದುವರಿಸಿಕೊAಡು ಹೋಗಬೇಕು ಎಂದು ಅವರು ಸಲಹೆ ಮಾಡಿದರು.

ಮನೆಹಳ್ಳಿ ತಪೋಕ್ಷೇತ್ರದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮನೆಹಳ್ಳಿ ಮಠದ ಅಭಿವೃದ್ಧಿಗೆ ಹಲವರು ಶ್ರಮಿಸಿದ್ದಾರೆ. ಮಠದಲ್ಲಿ ಗೋವುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

೨೦೧೧ ರಿಂದ ಗೋ ಶಾಲೆಯನ್ನು ಆರಂಭಿಸಲಾಗಿದ್ದು, ಹಳ್ಳಿಕಾರ್ ಜಾನುವಾರು ತಳಿಯನ್ನು ಸಂರಕ್ಷಿಸಲಾಗುತ್ತದೆ. ಗೋವುಗಳ ಮತ್ತು ಕೃಷಿಯ ಮಹತ್ವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಮಲೆನಾಡು ಗಿಡ್ಡ ಮತ್ತು ಹಳ್ಳಿಕಾರ್ ಜಾನುವಾರುಗಳನ್ನು ಸಾಕಲಾಗುತ್ತದೆ. ಗೋ ಮಾತೆಗೆ ಪ್ರತಿಯೊಬ್ಬರೂ ಕೃತಜ್ಞತೆ ಸಲ್ಲಿಸಬೇಕು. ಸಾವಯವ ಕೃಷಿಯನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು ಎಂದರು.

ಹಳ್ಳಿಕಾರ್ ಗೋವುಗಳನ್ನು ನಿರ್ದೇಶಕರಾದ ಸುರೇಶ್ ಭಟ್, ಕಾಫಿ ಮಂಡಳಿ ಉಪ ನಿರ್ದೇಶಕರಾದ ಸಿದ್ಧಲಿಂಗ ಸ್ವಾಮಿ, ಇತರರು ಇದ್ದರು.

ಕುಮಾರ್ ಸ್ವಾಗತಿಸಿದರು. ಸೋಮವಾರಪೇಟೆಯ ಗೀತಾಗಾಯನ ತಂಡದವರು ನಾಡಗೀತೆ ಹಾಡಿದರು. ಕಲಾವಿದ ಈ.ರಾಜು ಮತ್ತು ತಂಡದವರು ರೈತ ಗೀತೆ ಹಾಡಿದರು. ಸುಜಲಾ ದೇವಿ ನಿರೂಪಿಸಿದರು. ಪತ್ರಕರ್ತರಾದ ಎಸ್.ಮಹೇಶ್ ವಂದಿಸಿದರು.

ರಾಜ್ಯ ಮಟ್ಟದ ಸಾವಯವ ಕೃಷಿ ಹಾಗೂ ಕುಲ ಗೋವುಗಳ ಸಮ್ಮೇಳನ ಪ್ರಯುಕ್ತ ಕೃಷಿ, ತೋಟಗಾರಿಕೆ, ಪಶುಪಾಲನೆ, ಮತ್ತಿತರ ಇಲಾಖೆಗಳ ಮೂಲಕ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು, ಹಾಗೆಯೇ ಜಾನುವಾರುಗಳ ಪ್ರದರ್ಶನ ನಡೆಯಿತು.

ಗೀತಾಂಜಲಿ ಮಹೇಶ್ ಅವರು ಬರೆದಿರುವ ಭಾವಾಂಜಲಿ ಪುಸ್ತಕ ಹಾಗೂ ಕೃಷಿ ಇಲಾಖೆಯಿಂದ ಹೊರ ತಂದಿರುವ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

- ಬಾಸ್ಕರ್ ಮುಳ್ಳೂರು