ಕೂಡಿಗೆ, ಮಾ. ೨೫: ಕೂಡುಮಂಗಳೂರು ಗ್ರಾಮದ ಪೂರ್ಣಚಂದ್ರ ಬಡಾವಣೆಯ ಶ್ರೀ ಮಾತ ದಂಡಿನ ಚೌಡೇಶ್ವರಿ ಅಮ್ಮನವರ ವಾರ್ಷಿಕ ಮಹೋತ್ಸವ ಕಾರ್ಯಕ್ರಮ ದೇವಸ್ಥಾನ ಸಮಿತಿಯ ವತಿಯಿಂದ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮೊದಲ ದಿನ ಶೃಂಗೇರಿಯ ಎ.ಎನ್. ಕೃಷ್ಣಮೂರ್ತಿ ಭಟ್ ಹಾಗೂ ವೃಂದದ ವತಿಯಿಂದ ಗಣಪತಿ ಹೋಮ, ದುರ್ಗಹೋಮ ನವಕಲಶ ಸ್ಥಾಪನೆ, ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆಗಳು ನಡೆದವು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿನಿಯೋಗ ನಡೆದವು.

ಎರಡನೇ ದಿನ ವಿಶೇಷಪೂಜೆ, ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು. ಈ ಸಂದರ್ಭ ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ಎನ್. ರಕ್ಷಿನ್, ಉಪಾಧ್ಯಕ್ಷ ಕೆ.ಆರ್. ರೂಪೇಶ್, ಕಾರ್ಯದರ್ಶಿ ಕಿರಣ್, ಗೌರವ ಸಲಹೆಗಾರರಾದ ರಮೇಶ್, ನಂಜಪ್ಪ, ಸುಕೇಶ್ ಸೇರಿದಂತೆ ಸಮಿತಿಯ ಸದಸ್ಯರುಗಳಾದ ದರ್ಶನ್, ಕಿರಣ್, ವಿಕ್ರಮ, ಮಂಜುನಾಥ, ಕೃಷ್ಣ, ಮನೋಜ್, ನಾಗೇಶ್, ಪುಟ್ಟಸ್ವಾಮಿ, ರಾಮಕೃಷ್ಣ, ಚಿಟ್ಟು, ಗೌತಮ್ಮ, ಅಕ್ಷಯ, ವರುಣ್ ಇನ್ನಿತರರು ಹಾಜರಿದ್ದರು.