ಕುಶಾಲನಗರ, ಮಾ. ೨೬: ಕುಶಾಲನಗರ ಪಟ್ಟಣ ಪಂಚಾ ಯಿತಿಯ ೨೦೨೨-೨೩ನೇ ಸಾಲಿನ ಅಂದಾಜು ಆಯವ್ಯಯದ ಪಟ್ಟಿಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷ ಜಯವರ್ಧನ್ ಮಂಡನೆ ಮಾಡಿದರು.
೨೦೨೨-೨೩ನೇ ಸಾಲಿಗೆ ನಿರೀಕ್ಷಿತ ಆದಾಯ ರೂ. ೨೭ ಕೋಟಿ ೨೭ ಲಕ್ಷ ೮೯ ಸಾವಿರ ವಾಗಿದ್ದು ನಿರೀಕ್ಷಿತ ಖರ್ಚು ರೂ. ೨೭ ಕೋಟಿ ೧೮ ಲಕ್ಷ ಮಂಡನೆಯಾಗಿದ್ದು, ಈ ಸಾಲಿನಲ್ಲಿ ೯ ಲಕ್ಷ ೮೯ ಸಾವಿರ ರೂಪಾಯಿ ಉಳಿತಾಯ ಬಜೆಟ್ ಘೋಷಣೆ ಯಾಗಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯ ಸಭೆಯಲ್ಲಿ ಅಧ್ಯಕ್ಷ ಜೈವರ್ಧನ್ ಅವರ ಅವದಿಯ ನೇತೃತ್ವದಲ್ಲಿ ಇದೀಗ ಎರಡನೆಯ ಬಾರಿ ಬಜೆಟ್ ಅನ್ನು ಮಂಡಿಸಿದAತಾಗಿದೆ.
ಶೀಘ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವ ಕುಶಾಲನಗರ ಪಟ್ಟಣಕ್ಕೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪಂಚಾಯಿತಿಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಅದಕ್ಕೆ ತಕ್ಕಂತೆ ಆದಾಯ ಮೂಲಗಳು ತೆರಿಗೆ ಸಂಗ್ರಹ ಅನುದಾನ ಪಡೆಯುವ ಮೂಲಕ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆಡಳಿತ ಮಂಡಳಿ ಮೂಲಕ ಹಲವು ಯೋಜನೆಗಳನ್ನು ರೂಪಿಸುವುದಾಗಿ ಜಯವರ್ಧನ್ ಹೇಳಿದರು. ಕುಶಾಲನಗರ ಪಟ್ಟಣದ ವ್ಯಾಪ್ತಿಯಲ್ಲಿ ಇರುವ ಉದ್ಯಾನವನ ಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸುವುದು, ಪಟ್ಟಣದ ವ್ಯಾಪ್ತಿಯಲ್ಲಿರುವ ಕಡುಬಡವರು ಮೃತಪಟ್ಟ ಸಂದರ್ಭ ಅಂತ್ಯಸAಸ್ಕಾರಕ್ಕೆ ನೀಡುತ್ತಿದ್ದ ಸಹಾಯಧನದ ಏರಿಕೆ, ಪಂಚಾಯಿತಿಯಿAದ ಸಾರ್ವಜನಿಕ ಉಪಯೋಗಕ್ಕಾಗಿ ಸುಸಜ್ಜಿತ ವಾಹನ ಖರೀದಿ, ಪಂಚಾಯಿತಿ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಬೀದಿ ಬದಿ ವ್ಯಾಪಾರಸ್ಥರಿಗೆ ಸುಸಜ್ಜಿತ ವ್ಯಾಪಾರ ವಲಯ ನಿರ್ಮಾಣ, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸೂಕ್ತರೀತಿಯಲ್ಲಿ ವಾಹನ ಸಂಚಾರ ವ್ಯವಸ್ಥೆ ಮತ್ತು ಪಾರ್ಕಿಂಗ್ ಮಾಡಲು ಯೋಜನೆಗಳು, ಆದ್ಯತೆ ಮೇರೆಗೆ ಸೂಕ್ತ ಸ್ಥಳಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸುವುದು, ಕಾವೇರಿ ನದಿ ತಟದಲ್ಲಿ ಗಣಪತಿ ಮೂರ್ತಿ ವಿಸರ್ಜನೆಗಾಗಿ ಸೋಪಾನಕಟ್ಟೆ ಮತ್ತು ತೊಟ್ಟಿ ನಿರ್ಮಾಣ ಕಾರ್ಯ, ನಲ್ಮ್ ಯೋಜನೆಯಡಿಯಲ್ಲಿ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಮತ್ತು ತರಬೇತಿ ಕಾರ್ಯಕ್ರಮ ಸೇರಿದಂತೆ ಪಟ್ಟಣದಲ್ಲಿ ವಿಶೇಷ ಕಾರ್ಯಕ್ರಮಗಳಿಗೆ ಈ ಸಾಲಿನ ಬಜೆಟ್‌ನಲ್ಲಿ ಅನುದಾನ ಕಲ್ಪಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ತಿಳಿಸಿದರು.
ಈ ಸಂದರ್ಭ ಸಭೆಯಲ್ಲಿ ಸದಸ್ಯರು ಬಜೆಟ್ ಬಗ್ಗೆ ಚರ್ಚಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜನತೆಗೆ ಹೆಚ್ಚಿನ ತೆರಿಗೆ ವಿಧಿಸದಂತೆ ಆಡಳಿತ ಮಂಡಳಿ ಎಚ್ಚರ ವಹಿಸಬೇಕಾಗಿದೆ ಎಂದು ವಿರೋಧ ಪಕ್ಷದ ಸದಸ್ಯರು ಸಲಹೆ ನೀಡಿದರು. ಪಂಚಾಯಿತಿ ಉಪಾಧ್ಯಕ್ಷೆ ಸುರಯ್ಯ ಬಾನು, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಪ್ರಮೋದ್ ಮುತ್ತಪ್ಪ, ವಿ.ಎಸ್ ಆನಂದ್ ಕುಮಾರ್, ಕೆ.ಜಿ ಮನು, ಎಂ.ವಿ. ನಾರಾಯಣ, ಅಮೃತರಾಜ್, ಎಂ.ಕೆ. ಸುಂದರೇಶ್, ಕೆ.ಆರ್. ರೇಣುಕಾ, ಪುಟ್ಟಲಕ್ಷ್ಮಿ, ಜಯಲಕ್ಷ್ಮಿ, ಶೈಲಾ ಕೃಷ್ಣಪ್ಪ, ಜಯಲಕ್ಷ್ಮಮ್ಮ ಮತ್ತು ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿ ಉದಯಕುಮಾರ್ ಮತ್ತು ಸಿಬಂದಿಗಳು ಇದ್ದರು.