ಮಡಿಕೇರಿ, ಮಾ. ೨೬: ರಾಷ್ಟçದಲ್ಲಿ ಮಾತ್ರವಲ್ಲದೆ ಅಂರ‍್ರಾಷ್ಟಿçÃಯ ಮಟ್ಟದಲ್ಲೂ ಗಮನ ಸೆಳೆದಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಹಾಗೂ ಈ ಮೂಲಕ ರಾಷ್ಟçಕ್ಕೆ ಹಲವು ಹಾಕಿ ಆಟಗಾರರನ್ನು ಕೊಡುಗೆಯಾಗಿ ನೀಡಲು ಕಾರಣವಾಗಿರುವ ಪಂದ್ಯಾಟಕ್ಕೆ ಸರಕಾರ ರೂ. ೧ ಕೋಟಿ ಅನುದಾನ ಮೀಸಲಿಡಬೇಕು ಎಂದು ಕುಲ್ಲೇಟಿರ ಕುಟುಂಬದ ಪ್ರಮುಖರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ೨೦೧೮ ರ ಕುಲ್ಲೇಟಿರ ಕಪ್ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಶಂಭು ಮಂದಪ್ಪ, ಕಾರ್ಯದರ್ಶಿ ಅಜಿತ್ ನಾಣಯ್ಯ ಹಾಗೂ ಪ್ರಮುಖರು ಈ ಬಗ್ಗೆ ಮನವಿ ಮಾಡಿದರು.
ಈ ಹಾಕಿ ಉತ್ಸವಕ್ಕೆ ಸರಕಾರ ದಿಂದ ಘೋಷಿಸಲಾಗಿದ್ದ ರೂ. ೪೦ ಲಕ್ಷ ಅನುದಾನದ ಪೈಕಿ ಈತನಕ ಕೇವಲ ರೂ. ೨೫ ಲಕ್ಷ ಮಾತ್ರ ಹಣ ಬಿಡುಗಡೆಯಾಗಿತ್ತು. ಇದೀಗ ಬಾಕಿಯಿದ್ದ ರೂ. ೧೫ ಲಕ್ಷ ಹಣ ಲಭ್ಯವಾಗಿದ್ದು, ಪೂರ್ಣ ಅನುದಾನ ತಡವಾಗಿಯಾದರೂ ದೊರೆ ತಂತಾಗಿದೆ. ಈ ಅನುದಾನ ಬಿಡುಗಡೆ ಯಾಗಲು ಜಿಲ್ಲಾ ಬಿ.ಜೆ.ಪಿ. ಕಾರ್ಯಕಾರಿಣಿ ಸದಸ್ಯ ಹಾಗೂ ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಇವರ ಪ್ರಯತ್ನದ ಫಲವಾಗಿ ಬಾಕಿ ಉಳಿದಿದ್ದ ಅನುದಾನ ಸಿಕ್ಕಿರುವುದಾಗಿ ಕುಟುಂಬದ ಪ್ರಮುಖರು ಮಾಹಿತಿ ನೀಡಿ ಶ್ಲಾಘನೆ ವ್ಯಕ್ತಪಡಿಸಿದರು.
ಸುಮಾರು ನಾಲ್ಕು ವರ್ಷಗಳ ನಂತರ ನಮಗೆ ಅನುದಾನ ಬಿಡುಗಡೆಯಾಗಿದ್ದು, ಸರ್ಕಾರದ ಸಹಕಾರಕ್ಕೆ ನಾವು ಆಭಾರಿಯಾಗಿದ್ದೇವೆ. “ಕುಲ್ಲೇಟಿರ ಕೊಡವ ಹಾಕಿ ಹಬ್ಬ-೨೦೧೮”ಕ್ಕೆ ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಘೋಷಿಸಿದ ರೂ. ೪೦ ಲಕ್ಷ ಬಿಡುಗಡೆ ಮಾಡುವಂತೆ ನಾವು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೆವು. ಕಳೆದ ವರ್ಷ ರಾಜ್ಯ ಸರ್ಕಾರ ರೂ. ೨೫ ಲಕ್ಷವನ್ನು ಮಾತ್ರ ಬಿಡುಗಡೆ ಮಾಡಿತ್ತು. ಇದೀಗ ಉಳಿದ ರೂ. ೧೫ ಲಕ್ಷ ಬಿಡುಗಡೆ ಮಾಡುವ ಮೂಲಕ ನಾವು ಮನವಿ ಮಾಡಿದಂತೆ ಪೂರ್ಣ ಅನುದಾನವನ್ನು ನೀಡಿ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸುದೀರ್ಘ ೪ ವರ್ಷಗಳ ನಂತರ ಹಣ ಬಿಡುಗಡೆಯಾಗಲು ಶಿವ ಕುಮಾರ್ ನಾಣಯ್ಯ ಅವರು ಪ್ರಮುಖ ಕಾರಣಕರ್ತರಾಗಿದ್ದಾರೆ. ಅವರ ನೇತೃತ್ವದಲ್ಲಿ ಕುಲ್ಲೇಟಿರ ಕುಟುಂಬಸ್ಥರ ನಿಯೋಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕ್ರೀಡಾ ಸಚಿವ ನಾರಾಯಣ ಗೌಡ ಅವರನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಇದಕ್ಕೆ ಪೂರಕ ಸ್ಪಂದನ ನೀಡಿದ ಸರ್ಕಾರ ಇದೀಗ ಸಂಪೂರ್ಣ ಅನುದಾನವನ್ನು ಬಿಡುಗಡೆ ಮಾಡಿದೆ.
ಕಾರಣಕರ್ತರಾದ ಶಿವಕುಮಾರ್ ನಾಣಯ್ಯ ಅವರನ್ನು ೨೦೨೨ ಮೇ ತಿಂಗಳಿನಲ್ಲಿ ಕುಲ್ಲೇಟಿರ ಐನ್‌ಮನೆ ಯಲ್ಲಿ ನಡೆಯುವ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ರಾಷ್ಟಿçÃಯ ಮತ್ತು ಅಂರ‍್ರಾಷ್ಟಿçÃಯ ಮಟ್ಟಕ್ಕೆ ಹಾಕಿ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಲು ಕಾರಣವಾಗಿರುವ ಕೊಡವ ಕುಟುಂಬಗಳ ಹಾಕಿ ಹಬ್ಬಕ್ಕೆ ರೂ. ೪೦ ಲಕ್ಷಗಳನ್ನು ನೀಡುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿ ರೂ. ೧ ಕೋಟಿ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ಕ್ರೀಡಾ ಪ್ರೋತ್ಸಾಹವನ್ನು ನೀಡಬೇಕೆಂದರು. ಕುಲ್ಲೇಟಿರ ಕೊಡವ ಹಾಕಿ ಹಬ್ಬ ೨೦೧೮ ರ ಏಪ್ರಿಲ್ ೧೫ ರಿಂದ ಮೇ ೨೦ ರವರೆಗೆ ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸುಮಾರು ೩೫ ದಿನಗಳ ಕಾಲ ನಡೆದಿತ್ತು.
ರಾಜಕೀಯ ಲಾಬಿ ಬೇಕು
ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ಕುಲ್ಲೇಟಿರ ಒಂದು ಸಣ್ಣ ಕುಟುಂಬವಾಗಿದ್ದು, ದೊಡ್ಡ ಮಟ್ಟದ ಹಾಕಿ ಹಬ್ಬವನ್ನು ನಡೆಸಲು ತುಂಬಾ ಕಷ್ಟ ಪಡಬೇಕಾಯಿತು. ರೂ. ೪೦ ಲಕ್ಷ ಅನುದಾನ ಬಿಡುಗಡೆಯಾಗಬೇಕಾದರೆ ೪ ವರ್ಷ ಕಾಯಬೇಕಾಯಿತು. ಕ್ರೀಡಾಕೂಟ ನಡೆಸುವುದಕ್ಕೂ ರಾಜಕೀಯ ಲಾಬಿ ಬೇಕು ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಹಲವು ಅಡೆತಡೆಗಳು ಎದುರಾಗಿತ್ತು. ಇದೀಗ ರೂ. ೪೦ ಲಕ್ಷದಷ್ಟು ದೊಡ್ಡ ಮೊತ್ತವನ್ನು ಪಡೆದ ಮೊದಲ ಕುಟುಂಬ ಕುಲ್ಲೇಟಿರ ಆಗಿದ್ದು, ಮುಂದೆ ಹಾಕಿ ಹಬ್ಬ ನಡೆಸುವ ಕೊಡವ ಕುಟುಂಬಗಳಿಗೆ ಇದು ಉತ್ತೇಜನ ನೀಡಿದಂತಾಗಿದೆ ಎಂದರು.
ಸAಸದರ ಅನುದಾನ ರೂ. ೨೦ ಲಕ್ಷಗಳಲ್ಲಿ ನಾಪೋಕ್ಲು ಶಾಲೆಗೆ ತಡೆಗೋಡೆ ನಿರ್ಮಿಸಿಕೊಟ್ಟಿದ್ದೇವೆ ಎಂದು ಅಜಿತ್ ನಾಣಯ್ಯ ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಕುಲ್ಲೇಟಿರ ಬೇಬ ಅರುಣ್, ಖಜಾಂಚಿ ನಂದ ನಾಚಪ್ಪ, ನಿರ್ದೇಶಕರಾದ ಕುಲ್ಲೇಟಿರ ದೇವಿ ದೇವಯ್ಯ ಹಾಗೂ ಕುಲ್ಲೇಟಿರ ಲೋಕೇಶ್ ಉಪಸ್ಥಿತರಿದ್ದರು.