ಮಡಿಕೇರಿ, ಮಾ. ೨೫: ಜಿಲ್ಲೆಯ ಜೀವನಾಡಿ ಆಗಿರುವ ಕಾಫಿಯ ಶೇ. ೭೦ ರಷ್ಟು ಉತ್ಪಾದನೆ ವಿದೇಶಕ್ಕೆ ರಫ್ತಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಆಹಾರ ಪದಾರ್ಥಗಳಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಗುತ್ತಿರುವಂತೆ ಬಳಕೆದಾರರು ಸಾವಯವ ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ಆದರೆ ತೊಂದರೆ ಕೊಡುವ ಕ್ರಿಮಿ ಕೀಟಗಳ ಕಾಟದಿಂದಾಗಿ ಬೆಳೆಗಾರರು ರಾಸಾಯನಿಕಗಳ ಬಳಕೆ ಮಾಡುವುದು ಅನಿವಾರ್ಯ ಆಗಿದೆ. ಅಮೇರಿಕಾ ಸೇರಿದಂತೆ ಬಹುತೇಕ ಮುಂದುವರಿದ ರಾಷ್ಟçಗಳು ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಇರಬಹುದಾದ ಪ್ರಮಾಣವನ್ನು ನಿಗದಿಪಡಿಸಿವೆ ಮತ್ತು ನಿಗದಿತ ಪ್ರಮಾಣಕ್ಕಿಂತ ಮೀರಿದ ಆಹಾರ ಪದಾರ್ಥವನ್ನು ಮಾನವ ಸೇವನೆಗೆ ಅನರ್ಹ ಎಂದು ಪರಿಗಣಿಸಿ ತಿರಸ್ಕರಿಸಲಾಗುತ್ತದೆ. ಈ ದೇಶಗಳು ಕಟ್ಟು ನಿಟ್ಟಿನ ಗುಣ ಮಟ್ಟ ಪರೀಕ್ಷೆಯನ್ನೂ ಹೊಂದಿವೆ.

ಕಾಫಿಯಲ್ಲಿ ಮುಖ್ಯವಾಗಿ ಮಿಥೈಲ್ ಪ್ಯಾರಾಥಿಯಾನ್ (ಒeಣhಥಿಟ Pಚಿಡಿಚಿಣhಥಿioಟಿ) ಎಂಡೋಸಲ್ಫಾನ್ (ಇಟಿಜosuಟಜಿಚಿಟಿ) ಮತ್ತು ಕ್ಲೋರೋಫೈರಿಫಾಸ್ (ಅhಟoಡಿಠಿಥಿಡಿiಜಿos) ಎಂಬ ರಾಸಾಯನಿಕಗಳು ಇರುತ್ತವೆ. ಇದರಲ್ಲಿ ಮೊದಲಿನ ಎರಡು ರಾಸಾಯನಿಕಗಳ ಬಳಕೆ ದೇಶದಲ್ಲಿ ಇಲ್ಲ, ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಬಳಕೆಯಿಂದಾಗಿ ನೂರಾರು ಜನರು ಸಂತ್ರಸ್ಥರಾದರು. ಪ್ರಕರಣದ ಗಂಭೀರತೆ ಅರಿತ ಕೇಂದ್ರ ಸರ್ಕಾರ ಎಂಡೋಸಲ್ಫಾನ್‌ನ್ನು ಸಂಪೂರ್ಣ ನಿಷೇಧ ಮಾಡಿದೆ. ದೇಶದಲ್ಲಿ ಕಾಂಡ ಕೊರಕ ಹುಳುಗಳ ನಿಯಂತ್ರಣಕ್ಕೆ ವ್ಯಾಪಕವಾಗಿ ಕ್ಲೋರೋಫೈರಿಫಾಸ್ ರಾಸಾಯನಿಕವನ್ನು ಬಳಸಲಾಗುತ್ತಿದೆ. ಭಾರತದಿಂದ ರಫ್ತಾಗುವ ಕಾಫಿಯಲ್ಲಿ ಕ್ಲೋರೋಪೈರಿಫಾಸ್ ಅಂಶ ಹೆಚ್ಚಾಗಿದೆ ಎಂದು ಯೂರೋಪಿಯನ್ ರಾಷ್ಟçಗಳು ಆಕ್ಷೇಪ ಎತ್ತಿವೆ. ಅಲ್ಲದೆ ಇದು ಹೀಗೆ ಮುಂದುವರಿದರೆ ಭಾರತದಿಂದ ಆಮದು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿವೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಭಾರತದಲ್ಲಿ ಉತ್ಪಾದನೆ ಆಗುವ ಶೇ. ೭೦ ರಷ್ಟು ಕಾಫಿಯು ರಫ್ತನ್ನೇ ಅವಲಂಬಿಸಿರುವುದರಿAದ ಗುಣಮಟ್ಟ ಕಾಯ್ದುಕೊಳ್ಳುವುದು ಅನಿವಾರ್ಯವೇ ಆಗಿದೆ.

ಯೂರೋಪಿಯನ್ ಯೂನಿಯನ್ ರಾಷ್ಟçಗಳು ಈ ಹಿಂದೆ ಒಂದು ಕೆಜಿ ಕಾಫಿಯಲ್ಲಿ ಇರಬಹುದಾದ ಗರಿಷ್ಠ ಪ್ರಮಾಣದ ರಾಸಾಯನಿಕ .೨೦ ಮಿಲಿಗ್ರಾಂ ಎಂದು ನಿಗದಿಪಡಿಸಿದ್ದವು. ೬ ತಿಂಗಳ ಹಿಂದೆ ಅದನ್ನು ಪರಿಷ್ಕರಿಸಿ .೦೧ಗೆ ನಿಗದಿಪಡಿಸಿವೆ ಎಂದು ತಿಳಿದು ಬಂದಿದೆ. ವಿಶ್ವದ ಕಾಫಿ ಬೆಳೆಯುವ ಬಹುತೇಕ ರಾಷ್ಟçಗಳಲ್ಲಿ ವರ್ಷ ವರ್ಷ ರಾಸಾಯನಿಕ ಬಳಕೆ ಕಡಿಮೆ ಮಾಡಲಾಗುತ್ತಿದೆ.

ಆದರೆ ಭಾರತದಲ್ಲಿ ರಾಸಾಯನಿಕಗಳ ಬಳಕೆ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಕಡಿಮೆ ಆಗುತ್ತಿಲ್ಲ. ಅಂತಿಮವಾಗಿ ಇದರಿಂದ ಕಾಫಿ ರಫ್ತಿಗೆ ಹೊಡೆತ ಬೀಳಲಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿ ಉಪ ನಿರ್ದೇಶಕ ಬಿ. ಶಿವಕುಮಾರ ಸ್ವಾಮಿ ಅವರು ರಾಸಾಯನಿಕಗಳ ಕಾರಣದಿಂದ ಭಾರತದ ಕಾಫಿಗೆ ಯೂರೋಪ್ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದರೆ ಸಹಜವಾಗಿಯೇ ದೇಶದ ಆಂತರಿಕ ವಹಿವಾಟು ಕುಸಿಯಲಿದೆ. ಇದನ್ನು ತಡೆಯಲೆಂದೇ ಕಾಫಿ ಮಂಡಳಿಯು ಮುನ್ನೆಚ್ಚರಿಕಾ ಕ್ರಮವಾಗಿ ಬೆಳೆಗಾರರಿಗೆ ಕ್ಲೋರೋಫೈರಿಫಾಸ್ ಬಳಕೆಯನ್ನು ಕಡಿಮೆ ಮಾಡುವಂತೆ ಸೂಚನೆ ನೀಡಿದ್ದು ಕಾಂಡಕೊರಕ ಹುಳುಗಳ ಪರಿಣಾಮಕಾರಿ ನಿಯಂತ್ರಣಕ್ಕೆ ಸೂಚನೆಗಳನ್ನೂ ನೀಡಿದೆ ಎಂದರು.

ಒAದು ವೇಳೆ ದೇಶದ ಕಾಫಿಯನ್ನು ಯೂರೋಪಿಯನ್ ರಾಷ್ಟçಗಳು ಆಹಾರ ಸುರಕ್ಷತಾ ಗುಣಮಟ್ಟದ ಕಾರಣ ನೀಡಿ ತಿರಸ್ಕರಿಸಿದರೆ ಅದರ ಲಾಭ ಸಂಪೂರ್ಣವಾಗಿ ಬ್ರೆಜಿಲ್ ಗೆ ಆಗಲಿದೆ. ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ರಾಷ್ಟçವಾಗಿರುವ ಬ್ರೆಜಿಲ್‌ನಲ್ಲಿ ಹಿಮಪಾತದ ಕಾರಣದಿಂದ ಶೇ. ೧೦ ರಷ್ಟು ಅರೇಬಿಕಾ ಕಾಫಿ ಉತ್ಪಾದನೆ ನಾಶವಾಗಿದೆ. ಇದೇ ಕಾರಣದಿಂದಲೇ ದೇಶದಲ್ಲಿ ಅರೇಬಿಕಾ ಕಾಫಿ ಬೆಲೆ ಗರಿಷ್ಠ ಮಟ್ಟ ತಲುಪಿದೆ. ಬೆಳೆಗಾರರು ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಬೇಡಿಕೆ ಕುಸಿದು ಬೆಲೆಯು ಪಾತಾಳಕ್ಕಿಳಿ ಯಲಿದ್ದು ಬೆಳೆಗಾರರು ಮುನ್ನೆಚ್ಚರಿಕೆ ವಹಿಸಬೇಕಿದೆ.

- ಕೋವರ್‌ಕೊಲ್ಲಿ ಇಂದ್ರೇಶ್, ಮೊ. ೯೪೪೮೮೫೧೨೧೧