ನಾಪೋಕ್ಲು, ಮಾ. ೨೫: ಸ್ಥಳೀಯ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳನ್ನು ಮುಂದಿನ ಪರೀಕ್ಷೆಗೆ ತಯಾರಾಗಲು ಬೀಳ್ಕೊಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಶಾಲೆಯ ಪ್ರಾಂಶುಪಾಲೆ ಕಲಿಯಾಟಂಡ ಶಾರದ ೧೦ನೇ ತರಗತಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯಪಡದೇ ಪರೀಕ್ಷೆಯನ್ನು ಎದುರಿಸಬೇಕೆಂದು ಕಿವಿಮಾತು ಹೇಳಿದರು.

ನಿವೃತ್ತ ಪ್ರಾಂಶುಪಾಲ ಕಲಿಯಾಟಂಡ ಪೂಣಚ್ಚ ಮಾತನಾಡಿ, ವಿದ್ಯಾರ್ಥಿ ಗಳು ಪರೀಕ್ಷೆಗೆ ಈಗಿನಿಂದಲೇ ತಯಾರಿ ನಡೆಸಿಕೊಂಡು ಉತ್ತಮ ಫಲಿತಾಂಶ ತರಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಬೊಪ್ಪಂಡ ಜಾಲಿ ಬೋಪಯ್ಯ ವಹಿಸಿದ್ದರು. ಶಿಕ್ಷಕಿ ಪಾಡಿಯಮ್ಮಂಡ ಚಂದ್ರಕಲಾ ವಿದ್ಯಾರ್ಥಿಗಳ ಆಯ್ಕೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಬೊಪ್ಪಂಡ ಕುಶಾಲಪ್ಪ, ಅಪ್ಪಾರಂಡ ಅಪ್ಪಯ್ಯ, ಕೊಂಬAಡ ಗಣೇಶ್, ಬಿದ್ದಾಟಂಡ ಪಾಪ ಮುದ್ದಯ್ಯ, ಶಿಕ್ಷಕಿಯರಾದ ಮುಂಡAಡ ಕವಿತಾ ಅಯ್ಯಣ್ಣ, ಉದಿಯಂಡ ಶ್ವೇತಾ ಲೀಲಾವತಿ ಮತ್ತು ಶಿಕ್ಷಕ ವೃಂದ ಮತ್ತು ೧೦ನೇ ತರಗತಿಯ ವಿದ್ಯಾರ್ಥಿಗಳು ಇದ್ದರು.