ಮಡಿಕೇರಿ, ಮಾ. ೨೫: ಪ್ರಸಕ್ತ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐ.ಪಿ.ಎಲ್.) ಕ್ರಿಕೆಟ್ ಕಲರವ ತಾ. ೨೬ ರಿಂದ (ಇಂದಿನಿAದ) ಆರಂಭಗೊಳ್ಳಲಿದೆ.

೧೫ನೇ ಆವೃತ್ತಿಯ ಐ.ಪಿ.ಎಲ್. ಕ್ರಿಕೆಟ್ ಈ ಬಾರಿ ಕೆಲವೊಂದು ಹೊಸತನಗಳಿಂದ ಕೂಡಿರುವುದು ವಿಶೇಷ. ಎರಡು ಹೊಸ ತಂಡಗಳು, ಹೊಸ ಸ್ವರೂಪ, ಹೊಸ ನಿಯಮಾವಳಿಗಳು, ಜೊತೆಗೆ ಕೆಲವು ಹೊಸ ನಾಯಕರುಗಳು ತಂಡಗಳನ್ನು ಮುನ್ನಡೆಸಲಿದ್ದು, ಕ್ರಿಕೆಟ್ ಪ್ರೇಮಿಗಳು ಸುಮಾರು ಒಂದೂವರೆ ತಿಂಗಳು ಕ್ರಿಕೆಟ್ ಜ್ವರ ಅನುಭವಿಸಲಿದ್ದಾರೆ.

ಈ ಬಾರಿಯ ಐ.ಪಿ.ಎಲ್.ನಲ್ಲಿ ಕೊಡಗಿನ ಮೂವರು ವಿವಿಧ ಫ್ರಾಂಚೈಸಿಗಳು ಪ್ರತಿನಿಧಿಸುತ್ತಿದ್ದಾರೆ. ಚೆನ್ನೆöÊ ಸೂಪರ್ ಕಿಂಗ್ಸ್ನ ಪರವಾಗಿ ರಾಬಿನ್ ಉತ್ತಪ್ಪ, ರಾಜಸ್ಥಾನ ರಾಯಲ್ಸ್ ಪರ ಕೆ.ಸಿ. ಕಾರ್ಯಪ್ಪ ಆಟಗಾರರಾಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಫಿಸಿಯೋ ಆಗಿ ಕೆ.ಆರ್. ಶ್ರವಣ್ ಕಾರ್ಯನಿರ್ವಹಿಸುತ್ತಿದ್ದಾರೆ. ಚೆನ್ನೆöÊ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈರ‍್ಸ್ ನಡುವೆ ಪ್ರಥಮ ಪಂದ್ಯ ಶನಿವಾರದಂದು ನಡೆಯಲಿದೆ.