ಸೋಮವಾರಪೇಟೆ, ಮಾ. ೨೬: ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರö್ಯದೊAದಿಗೆ ಆಯ್ಕೆ ಸ್ವಾತಂತ್ರö್ಯವೂ ಇರಬೇಕು. ಹಾಗಾದಾಗ ಮಾತ್ರ ಮಹಿಳಾ ಸಬಲೀಕರಣಕ್ಕೆ ಅರ್ಥ ಬರುತ್ತದೆ ಎಂದು ಹಿರಿಯ ಲೇಖಕಿ ಶ.ಗ. ನಯನತಾರಾ ಅಭಿಪ್ರಾಯಿಸಿದರು.

ತಾಲೂಕು ಸ್ತಿçÃಶಕ್ತಿ ಬ್ಲಾಕ್ ಸೊಸೈಟಿ ವತಿಯಿಂದ ಇಲ್ಲಿನ ಸ್ತಿçà ಶಕ್ತಿ ಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ಇಂದು ದುಡಿಯುವ ವರ್ಗದಲ್ಲಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಉದ್ಯೋಗದಿಂದ ಹಣವನ್ನೂ ಸಂಪಾದಿಸುತ್ತಿದ್ದಾರೆ. ಆದರೆ ಈ ಸಂಪಾದನೆಯ ಹಣವನ್ನು ತನ್ನಿಷ್ಟದಂತೆ ಬಳಸಿಕೊಳ್ಳುವ ಸ್ವಾತಂತ್ರö್ಯ ಹಲವಷ್ಟು ಮಹಿಳೆಯರಿಗೆ ಇಲ್ಲವಾಗಿದೆ ಎಂದು ವಿಷಾಧಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಮಹಿಳೆಯರು ಇಂದು ಎಲ್ಲಾ ರಂಗದಲ್ಲಿಯೂ ಪುರುಷರಿಗೆ ಸರಿಸಮಾನರಾಗಿದ್ದಾರೆ. ಮಹಿಳಾ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವ ಮೂಲಕ ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ಇನ್ನಷ್ಟು ಗುರುತಿಸಿಕೊಳ್ಳಬೇಕು ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ ಮಾತನಾಡಿ, ಮಹಿಳೆಯರು ಶಿಕ್ಷಿತರಾದರೆ ಸಮಾಜವೇ ಶಿಕ್ಷಣ ಪಡೆಯುತ್ತದೆ. ಸಂವಿಧಾನ ನೀಡಿರುವ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಭನ ಸಾಧಿಸಬೇಕು ಎಂದು ಕಿವಿಮಾತು ನುಡಿದರು.

ಸ್ತಿçà ಶಕ್ತಿ ಸೊಸೈಟಿಯ ರಾಜ್ಯಾಧ್ಯಕ್ಷೆ ರೆಹಾನ ಸುಲ್ತಾನ್ ಮಾತನಾಡಿ, ನಿಸ್ವಾರ್ಥದಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಮಾತ್ರ ದೌರ್ಜನ್ಯಕ್ಕೊಳಗಾಗಿ ಮಹಿಳೆಯರಿಗೆÀ ನೆರವು ಒದಗಿಸಬಹುದು. ಈ ನಿಟ್ಟಿನಲ್ಲಿ ಮಹಿಳೆಯರು ಇನ್ನಷ್ಟು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಬ್ಲಾಕ್ ಸೊಸೈಟಿ ಅಧ್ಯಕ್ಷೆ ಸುಮತಿ ಅವರು ಅಧ್ಯಕ್ಷತೆ ವಹಿಸಿದ್ದರು. ಪ.ಪಂ. ಸದಸ್ಯ ಬಿ.ಆರ್. ಮಹೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಗುರುಬಸಮ್ಮ, ಸಾವಿತ್ರಮ್ಮ, ಬ್ಲಾಕ್ ಸೊಸೈಟಿ ಉಪಾಧ್ಯಕ್ಷೆ ಯಶೋಧ, ಖಜಾಂಚಿ ದಮಯಂತಿ, ಕಾರ್ಯದರ್ಶಿ ಹೇಮ, ಮೇರಿ ಅಂಬುದಾಸ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ತಿçà ಶಕ್ತಿ ಸಂಘದ ಸದಸ್ಯರುಗಳು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು ಭಾಗವಹಿಸಿದ್ದರು.