ಮಡಿಕೇರಿ, ಮಾ. ೨೫: ಸಾರಿಗೆ ಇಲಾಖೆ, ಪರಿಸರ ಮತ್ತು ಇ-ಆಡಳಿತ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ‘ವಾಯು ಮಾಲಿನ್ಯ ನಿಯಂತ್ರಣ’ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಚಾಲನೆ ನೀಡಿದರು. ‘ವಾಯು ಮಾಲಿನ್ಯ ತಡೆಯೋಣ, ಪರಿಸರ ಉಳಿಸೋಣ’ ಎಂಬ ಘೋಷವಾಕ್ಯದೊಂದಿಗೆ ವಾಯು ಮಾಲಿನ್ಯ ಜಾಗೃತಿ ಜಾಥಾಗೆ ಚಾಲನೆ ದೊರೆಯಿತು. ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಇನ್ಸ್ಪೆಕ್ಟರ್ ಶಿವಕುಮಾರ್, ಅಧೀಕ್ಷಕರಾದ ಮೋಹನ್‌ಕುಮಾರ್, ಸಲೀಮಾ, ರೀಟಾ, ಬಾಬು, ಇತರರು ಇದ್ದರು.